ಮೈಸೂರು

ಇಂದು “ಅಕ್ಷಯಾಂಬರ” ನಾಟಕ ಪ್ರದರ್ಶನ

ಮೈಸೂರಿನ ರಂಗವಲ್ಲಿ ರಂಗಸಂಭ್ರಮದಲ್ಲಿ ಸಂಶೋಧನೆ ಮತ್ತು ವೈಯಕ್ತಿಕ ಅನುಭವಗಳನ್ನು ಆಧಾರವಾಗಿಟ್ಟುಕೊಂಡ, ಜನಪ್ರಿಯ ಯಕ್ಷಗಾನ ಪ್ರಸಂಗವಾದ “ದ್ರೌಪದಿ ವಸ್ತ್ರಾಪಹರಣ”ದ “ಅಕ್ಷಯಾಂಬರ” ನಾಟಕ ಇಂದು ಕಲಾಮಂದಿರದ ಮನೆಯಂಗಳದಲ್ಲಿ ಪ್ರದರ್ಶನಗೊಳ್ಳಲಿದೆ.

ನಾಟಕವನ್ನು ಶರಣ್ಯಾ ರಾಮಪ್ರಕಾಶ್ ರಚಿಸಿ ನಿರ್ದೇಶಿಸಿದ್ದು ಒಬ್ಬ ಗಂಡು ಕಲಾವಿದ ಸಾಧ್ವಿ ಸದ್ಗುಣಿ ದ್ರೌಪದಿಯ ಸ್ತ್ರೀವೇಷ ಧರಿಸಿ ಹೆಣ್ತನವನ್ನು ಸಮರ್ಥಿಸಿಕೊಂಡರೆ ಒಬ್ಬ ಹೆಂಗಸು ಪರಂಪರೆಯನ್ನು ಧಿಕ್ಕರಿಸುವಂತ ನಡೆಯಲ್ಲಿ ಪ್ರಧಾನ ಪುರುಷಪಾತ್ರವಾದ, ಕಾಮುಕ ಮತ್ತು ಅಧಿಕಾರದಾಹಿ ಕೌರವನ ವೇಷ ಧರಿಸುತ್ತಾಳೆ. ಒಬ್ಬ ಗಂಡು ಸ್ತ್ರೀ ವೇಷಧಾರಿಯಾಗಿ ಮತ್ತು ಗಂಡುವೇಷವನ್ನು ಒಬ್ಬ ಹೆಂಗಸು ನಿರ್ವಹಿಸುವಾಗ ‘ಲಿಂಗ’ದ ಅರ್ಥ, ವ್ಯಾಖ್ಯಾನಗಳು ಏನಾಗುತ್ತವೆ? ಯಾರು ನಿಜವಾದ ಹೆಂಗಸು ಮತ್ತು ಯಾರು ನಿಜವಾದ ಗಂಡಸು? ಗಂಡಸನ್ನು ಸ್ತ್ರೀವೇಷಧಾರಿಯಾಗಿ ಒಪ್ಪಿಕೊಳ್ಳುವ ಒಂದು ಪರಂಪರೆ ಹೆಂಗಸನ್ನು ಪುರುಷವೇಷವಾಗಿ ಒಪ್ಪಿಕೊಳ್ಳುತ್ತದೆಯೇ? ಸುಮಾರು 800 ವರ್ಷಗಳ ಇತಿಹಾಸವಿರುವ ಯಕ್ಷಗಾನದಂತಹ ವೃತ್ತಿಪರ ಕಲೆಯಲ್ಲಿ ಹೆಂಗಸರು ಪ್ರವೇಶಿಸಿದಾಗ ಏನಾಗುತ್ತದೆ? – ಇವು ನಾಟಕದಲ್ಲಿ ಪ್ರಮುಖವಾಗಿ ಅಳವಡಿಸಿರುವ ಪ್ರಶ್ನೆಗಳು. ಉತ್ತರ ಬೇಕೆಂದರೆ ನಾಟಕ ನೋಡಿ.

ಕೃತಿ ಆರ್. ಅವರಿಂದ ಕನ್ನಡಕ್ಕೆ ಅನುವಾದಗೊಂಡು, ಸುರಭಿ ಹೆರೂರುರಿಂದ ಸಹ ನಿರ್ದೇಶನ, ಶುಭ್ರ ನಾಯರ್ ಕಲಾ ವಿನ್ಯಾಸ ಮಾಡಿದ್ದಾರೆ. ಪದ್ಯ ಸಂಯೋಜನೆ- ಗುರು ಸುಬ್ರಮಣ್ಯ ಪ್ರಸಾದ್, ಕೃತಿ ಆರ್. ಮತ್ತು ಶರಣ್ಯಾ ರಾಮಪ್ರಕಾಶ್ ಇವರುಗಳಿಂದ ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂಜೆ 4:30ಕ್ಕೆ ಹಿಂದೂಸ್ತಾನಿ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಕಳೆದ ಅ.21 ರಿಂದ ನಡೆದ ರಂಗವಲ್ಲಿ ರಂಗಸಂಭ್ರಮಕ್ಕೆ ಇಂದು ತೆರೆ ಬೀಳುವುದು.

Leave a Reply

comments

Related Articles

error: