ಮೈಸೂರು

ಜಯಲಲಿತಾ ಅಭಿಮಾನಿಗಳಿಂದ ಬೆಳ್ಳಿ ರಥ ಪಲ್ಲಕ್ಕಿ ಉತ್ಸವ ಸೇವೆ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಗುಣಮುಖರಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ತಮಿಳುನಾಡಿನ ಅವರ ಅಭಿಮಾನಿಗಳು ಭಾನುವಾರ ಬೆಳಿಗ್ಗೆ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಬೆಳ್ಳಿ ರಥ ಪಲ್ಲಕ್ಕಿ ಉತ್ಸವವನ್ನು ಆಯೋಜಿಸಿದ್ದರು.

ಭಾನುವಾರ ಬೆಳಿಗ್ಗೆ ಜಯಲಲಿತಾ ಅಭಿಮಾನಿಗಳು ಆಯೋಜಿಸಿದ್ದ ಬೆಳ್ಳಿ ರಥ ಪಲ್ಲಕ್ಕಿ ಉತ್ಸವದ ಜೊತೆ ಜಯಲಲಿತಾ ಅವರ ಭಾವಚಿತ್ರವನ್ನು ಹಿಡಿದು ಸಾಗುತ್ತಿರುವುದು ಕಂಡು ಬಂತು. ಶ್ರೀಚಾಮುಂಡೇಶ್ವರಿ ದೇವಳದ ಪ್ರಧಾನ ಅರ್ಚಕ ಶಶಿಧರ್ ನೇತೃತ್ವದಲ್ಲಿ ಬೆಳ್ಳಿ ರಥ ಪಲ್ಲಕ್ಕಿ ಉತ್ಸವ ಜರುಗಿತು.

ನೂರಾರು ಅಭಿಮಾನಿಗಳು ಈ ಸಂದರ್ಭ ಪಾಲ್ಗೊಂಡು ಮುಖ್ಯಮಂತ್ರಿ ಜಯಲಲಿತಾ ಅವರ ಆಯುರಾರೋಗ್ಯ ಇನ್ನಷ್ಟು ವೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.

Leave a Reply

comments

Related Articles

error: