ಮೈಸೂರು

ಮೈಸೂರು ಜಿಲ್ಲಾ ಬ್ರಾಹ್ಮಣ ಸಭಾದಿಂದ ವರಸಿದ್ಧಿ ವಿನಾಯಕ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು

ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಸೆಪ್ಟೆಂಬರ್ 5ರಿಂದ 14ರವರೆಗೆ ಸಾಯಂಕಾಲ 6ರಿಂದ ಸಂಜೆ 8ರವರೆಗೆ ವರಸಿದ್ಧಿ ವಿನಾಯಕ ಮಹೋತ್ಸವ ನಡೆಯಲಿದೆ.

ಸೆಪ್ಟೆಂಬರ್ 5ರಂದು ಸಂಜೆ 6 ಗಂಟೆಗೆ ಪ್ರತಿಷ್ಠಾಪನೆ, 8ಗಂಟೆಗೆ ಮಹಾಮಂಗಳಾರತಿ. ಸೇವಾರ್ಥ: ಜಿಲ್ಲಾ ಬ್ರಾಹ್ಮಣ ಸಭೆ ಕಾರ್ಯಕಾರಿ ಮಂಡಳಿ ಹಾಗೂ ಎಸ್.ಸುಶೀಲ ಟ್ರಸ್ಟಿಗಳು.

ಸೆಪ್ಟೆಂಬರ್ 6ರಂದು ಸಂಗೀತ- ವಿದ್ವಾನ್ ಭಾಗ್ಯಲಕ್ಷ್ಮಿ ನಾರಾಯಣ, ಭಜನೆ-ಪದ್ಮಿನಿ ವಲ್ಲಭ ಭಜನ ಮಂಡಳಿ ಸೇವಾರ್ಥ:ಶಾಂತಶೇಷಾದ್ರಿಯವರ ಕುಟುಂಬ. ದೀಪಕ್ ಬಿಜೆಪಿ ಯುವ ಮುಖಂಡರು.

ಸೆಪ್ಟೆಂಬರ್ 7ರಂದು ಗಮಕವಾಚನ ವಿದುಷಿ ಗಮಕ ನಾಗರತ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು, ಭಜನೆ:ರಾಗಸಂವರ್ಧಿನಿ ಮಹಿಳಾ ಸಂಘ ಸೇವಾರ್ಥ:ಬಿ.ಮಂಜುನಾಥ್ ಮತ್ತು ಮುಳ್ಳೂರು ಗುರುಪ್ರಸಾದ್.

ಸೆಪ್ಟೆಂಬರ್ 8ರಂದು ಭಜನೆ ಮತ್ತು ದೇವರನಾಮ-ಯಶಸ್ವಿನಿ ಮಹಿಳಾ ಸಂಘ, ಗಮಕ ವಾಚನ- ಕೃಪ ಮಂಜುನಾಥ್. ಸೇವಾರ್ಥ ಕೆ.ರಘುರಾಂ ಮತ್ತು ಸುರೇಶ್(ಹೊಟೇಲ್ ಅಪೂರ್ವ)

ಸೆಪ್ಟೆಂಬರ್ 9ರಂದು ಭಜನಾ ಮತ್ತು ಹಾಡುಗಾರಿಕೆ-ಗಾಯಿತ್ರಿ ಮಹಿಳಾ ಸಂಘ ಹಾಗೂ ರಂಗೋಲಿಯಲ್ಲಿ ವಿವಿಧ ಚಿತ್ರ ಬಿಡಿಸುವ ಸ್ಪರ್ಧೆ. ಸೇವಾರ್ಥ: ಜಿ.ರವಿ ಮತ್ತು ಡಿ.ಟಿ.ಪ್ರಕಾಶ್

ಸೆಪ್ಟೆಂಬರ್ 10ರಂದು ಭಜನಾ ಸ್ಪರ್ಧೆ. 10 ಭಜನಾ ತಂಡಗಳಿಂದ ಹಾಗೂ ರಾಮಾನುಜಾಚಾರ್ಯರ ಕುರಿತು ಪ್ರವಚನ, ಪ್ರೊ.ವಿದ್ವಾನ್ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್. ಸೇವಾರ್ಥ: ಎಚ್.ವಿ.ರಾಜೀವ್ ಮತ್ತು ಕುಟುಂಬ

ಸೆಪ್ಟೆಂಬರ್ 11ರಂದು ವೇದ ಪಾರಾಯಣ ಹಿಂಹಿತ ಭಾಗ ಮತ್ತು ಅರಣ್ಯಕ ಹಾಗೂ ಭಜನೆ-ಬಾಲಾಜಿ ಮಹಿಳಾ ಮಂಡಳಿ ಹಾಗೂ ಹರಿಕಥೆ. ಸೇವಾರ್ಥ: ಎಸ್.ಎ.ರಾಮದಾಸ್. ದಿ.ಮಾತೃಶ್ರೀ ಹೆಸರಲ್ಲಿ

ಸೆಪ್ಟೆಂಬರ್ 12ರಂದು ಮಧ್ವಾಚಾರ್ಯರ ಕುರಿತು ಪ್ರವಚನ –ವಿದ್ವಾನ್ ಪ್ರಹ್ಲಾದ್ ರಾವ್ ಹಾಗೂ ಭಜನೆ- ಪದ್ಮಿನಿ ವಲ್ಲಭ ಭಜನ ಮಂಡಳಿ. ಸೇವಾರ್ಥ ಕೆ.ಆರ್.ಮೋಹನ್ ಕುಮಾರ್ ಮತ್ತು ಪುಷ್ಪ ಅಯ್ಯಂಗಾರ್

ಸೆಪ್ಟೆಂಬರ್ 13ರಂದು ಶ್ರೀಶಂಕರ ಭಗವತ್ಪಾದರ ಕುರಿತು ಪ್ರವಚನ. ಪ್ರೊ.ವಿದ್ವಾನ್ ಡಾ.ಟಿ.ವಿ.ಸತ್ಯನಾರಾಯಣ ಹಾಗೂ ಭಜನೆ-ತ್ರಿಪುರಸುಂದರಿ ಭಜನ ಮಂಡಳಿ. ಸೇವಾರ್ಥ: ಎಂ.ಡಿ.ಪಾರ್ಥಸಾರಥಿ ಎಲ್ಲಾ ಸಮೂಹ ಸಂಸ್ಥೆಗಳು ಹಾಗೂ ಗಾಯತ್ರಿ ಮಹಿಳಾ ಮಂಡಳಿಗಳಿಂದ.

ಸೆಪ್ಟೆಂಬರ್ 14ರಂದು 11ಗಂಟೆಗೆ ಸಭಾ ಕಾರ್ಯಕ್ರಮ, ಗಣೇಶ ಅಷ್ಟೋತ್ತರ, ರುದ್ರಾಭಿಷೇಕ, ಮಹಾಮಂಗಳಾರತಿ, ಮಹಾಪ್ರಸಾದ ಮತ್ತು ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪತ್ರ, ಫಲಕ, ಗೌರವ ಧನ ವಿತರಣೆ, ಡಾ.ಭಾಷ್ಯಂ ಸ್ವಾಮೀಜಿ, ಕೆ.ರಘುರಾಂ, ಎಸ್.ಎ.ರಾಮದಾಸ್, ಹೆಚ್.ವಿ.ರಾಜೀವ, ಕೆ.ಆರ್.ಮೋಹನ್ ಕುಮಾರ್, ಜಿ.ರವಿ, ಬಿ.ವಿ.ಮಂಜುನಾಥ್, ದೀಪಕ್, ಗುರುಪ್ರಸಾದ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಧ್ಯಕ್ಷ ಬಿ.ಆರ್.ನಟರಾಜ್ ಜೋಯಿಷ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಪತ್ರಕರ್ತ ಎಸ್.ನಾಗರಾಜ್ ನಿರೂಪಿಸಲಿದ್ದಾರೆ.

Leave a Reply

comments

Related Articles

error: