ಕರ್ನಾಟಕಮೈಸೂರು

ದಸರಾ ವಸ್ತು ಪ್ರದರ್ಶನ: ನೆರೆ ರಾಜ್ಯದ ಪ್ರವಾಸಿಗರದ್ದೇ ಮೇಲುಗೈ

exhi-webಮೈಸೂರು ದಸರಾದ ಪ್ರಮುಖ ಆರ್ಕಷಣೆಗಳಲ್ಲಿ ಒಂದಾದ ದಸರಾ ವಸ್ತುಪ್ರದರ್ಶನಕ್ಕೆ ವಾರಾಂತ್ಯ ಭೇಟಿ ನೀಡುವವರಲ್ಲಿ ನೆರೆ ರಾಜ್ಯದ ಪ್ರವಾಸಿಗರ ಸಂಖ್ಯೆಯೇ ಅಧಿಕ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ‘ಸಿಟಿಟುಡೆ’ ಜೊತೆ ಮಾತನಾಡಿದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.

ಕಳೆದ ಅ.1ರಿಂದ ಆರಂಭಗೊಂಡಿರುವ ವಸ್ತುಪ್ರದರ್ಶನಕ್ಕೆ ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ತಮಿಳುನಾಡು, ದೆಹಲಿ ಸೇರಿದಂತೆ ದೇಶದ ಎಲ್ಲ ವಿವಿಧ ಭಾಗಗಳ ಪ್ರವಾಸಿಗರು ವಾರಾಂತ್ಯದಲ್ಲಿ ಭೇಟಿ ನೀಡುವುದು ಹೆಚ್ಚು. ಈ ಬಾರಿ ಕೇರಳ ಹಾಗೂ ಮಹಾರಾಷ್ಟ್ರದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ತಮಿಳರ ಸಂಖ್ಯೆ ಗಣನೀಯವಾಗಿ ಕುಸಿದೆ ಎನ್ನುವುದು ಮಾಹಿತಿಯಿಂದ ಬಹಿರಂಗವಾಗಿದೆ.

ಕರ್ನಾಟಕದ ನೆರೆ ರಾಜ್ಯಗಳೂ ಸೇರಿದಂತೆ ವಿವಿಧ ಜಿಲ್ಲೆಗಳ ಸುಪ್ರಸಿದ್ಧ ವಸ್ತು ಪ್ರದರ್ಶನ ಮಳಿಗೆಗಳು, ಸರ್ಕಾರದ ವಿವಿಧ ಯೋಜನೆಗಳ ಜಾಹೀರಾತುಗಳು, ನಿಗಮ ಮಂಡಳಿಯ ಮಳಿಗೆಗಳು ಸೇರಿದಂತೆ ಹುಬ್ಬಳ್ಳಿ-ಧಾರವಾಡದ ಜನಪ್ರಿಯ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಚುರುಮುರಿ, ನಾಲಿಗೆ ತಣಿಸಲು ನೂರಾರು ಬಗೆಯ ತಿಂಡಿ ತಿನಿಸುಗಳು, ಆಟಿಕೆಗಳು ಸೇರಿದಂತೆ ಮನೋಲ್ಲಾಸ ನೀಡುವ ಮೈಸೂರು ದಸರಾ ವಸ್ತು ಪ್ರದರ್ಶನವು ವಾರಾಂತ್ಯದ ಭೇಟಿಗೆ ಹೇಳಿ ಮಾಡಿಸಿದ ಜಾಗವೆನ್ನುವುದು ಪ್ರವಾಸಿಗರ ಅನಿಸಿಕೆ. ನಿತ್ಯ ಜಂಜಾಟದ ಮಾನಸಿಕ ಆಯಾಸ ಮರೆಸಿ ಪ್ರತಿಯೊಬ್ಬರ ಮನತಣಿಸುವ ತಾಣವಿದು. ಈ ಕಾರಣದಿಂದ ಸ್ಥಳೀಯರು, ರಾಜ್ಯ, ಹೊರ ರಾಜ್ಯದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ದಸರಾ ವಸ್ತುಪ್ರದರ್ಶನ.

exhi-food-webವಸ್ತು ಪ್ರದರ್ಶನಕ್ಕೆ ಆನ್ ಲೈನ್ ಟಿಕೆಟ್: ಪ್ರಸಕ್ತ ಸಾಲಿನಿಂದ ದಸರಾ ವಸ್ತು ಪ್ರದರ್ಶನದ ಟಿಕೆಟ್ ಆನ್^ಲೈನ್ ಮೂಲಕ ಲಭಿಸುತ್ತಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ‘ಸಿಟಿಟುಡೆ’ಯೊಂದಿಗೆ ಮಾತನಾಡಿದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯಸ್ಥೆ ಅಸಿಸ್ಟೆಂಟ್ ಇಂಜಿನಿಯರ್ ಕೆ.ಪಿ. ಸಿಂಧು ತಿಳಿಸಿದ್ದಾರೆ.

ವಾರದ ದಿನಗಳಲ್ಲಿ ಸ್ಥಳೀಯರು, ವಾರಾಂತ್ಯದಲ್ಲಿ ನೆರೆಯ ಕೇರಳ, ಆಂಧ್ರ, ತೆಲಂಗಾಣ, ಗೋವಾ, ಮಹಾರಾಷ್ಟ್ರ ಸೇರಿದಂತೆ ದೆಹಲಿಯ ಪ್ರವಾಸಿಗರೂ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಪ್ರಪ್ರಥಮವಾಗಿ ಅನ್^ಲೈನ್ ಟಿಕೆಟಿಂಗ್ ಕಲ್ಪಿಸಲಾಗಿದ್ದು, ಇದಕ್ಕಾಗಿ ಹಾರ್ಡ್^ವೇರ್ & ಸಾಫ್ಟ್^ವೇರ್ ಸೇರಿದಂತೆ ಸೂಟಬಲ್ ಇಂಟರ್^ನೆಟ್ ಸಂಪರ್ಕ, ಯುಪಿಸಿ ಬ್ಯಾಕಪ್, ಇ-ಪ್ರೊಕ್ಯೂರ್^ಮೆಂಟ್ ನಿಂದ 9.5 ಲಕ್ಷಕ್ಕೇ ಟೆಂಡರ್ ಕರೆಯಲಾಗಿತ್ತು. ಕಡಿಮೆ ಬಿಡ್ ಮಾಡಿದ್ದ ನೆಕ್ಷೊರ್ಸ್ ಪ್ರೈವೇಟ್ ಲಿಮಿಟೆಡ್ ಗೆ ಈ ಬಾರಿ ದಸರಾ ವಸ್ತು ಪ್ರದರ್ಶನ ಟೆಂಡರ್ ಲಭಿಸಿದ್ದು ಪಾರ್ಕಿಂಗ್ ಸೇರಿದಂತೆ ಟಿಕೆಟಿಂಗ್ ಕೌಂಟರ್ ವ್ಯವಸ್ಥೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ವಾರದ ದಿನಗಳಲ್ಲಿ 2-3 ಸಾವಿರವಿರುವ ಪ್ರವಾಸಿಗರ ಸಂಖ್ಯೆ ಶನಿವಾರ ಮತ್ತು ಭಾನುವಾರದಂದು 20 ಸಾವಿರ ಮೀರುತ್ತದೆ. ಇದೇ ಪ್ರಥಮ ಭಾರಿ ಪರಿಚಯರಿಸಿರುವ ಅನ್^ಲೈನ್ ಟಿಕೆಟ್ ಬುಕ್ಕಿಂಗ್ ಗೆ ವೀಕ್ಷಕರು ಅಷ್ಟಾಗಿ ಸ್ಪಂದಿಸಿಲ್ಲ, ಈ ಶನಿವಾರ ಮತ್ತು ಭಾನುವಾರ ಕಾದು ನೋಡಬೇಕು ಎಂದರು ಡಿ. 25 ಕ್ಕೆ ವಸ್ತು ಪ್ರದರ್ಶನ ಅಂತ್ಯಗೊಳ್ಳುವುದು.

ಪಾರ್ಕಿಂಗ್ ಶುಲ್ಕ ಲಕ್ಷಾಂತರ ರೂ. ಸಂಗ್ರಹ:

ದೊಡ್ಡ ಕೆರೆ ಮೈದಾನದಲ್ಲಿ ವ್ಯವಸ್ಥೆ ಮಾಡಿರುವ ವಾಹನ ಪಾರ್ಕಿಂಗ್ ಶುಲ್ಕದಿಂದಲೇ ಪ್ರತಿದಿನಕ್ಕೆ ಕನಿಷ್ಟ ಸಾವಿರಾರು ರೂಪಾಯಿಗಳು ಸಂಗ್ರಹವಾಗುತ್ತಿದೆ. ವಾರಾಂತ್ಯ ಶನಿವಾರ – ಭಾನುವಾರಗಳಂದು ಕನಿಷ್ಟ ಸಾವಿರದ ಐದುನೂರಿಂದ ಎರಡು ಸಾವಿರದವರೆಗೂ ದ್ವಿಚಕ್ರ, ಲಘು ವಾಹನ ಹಾಗೂ ಬಸ್ ಗಳಲ್ಲಿ ಪ್ರವಾಸಿಗರು ಆಗಮಿಸುವರು, ಈ ಬಾರಿ ಕೇರಳ ಪ್ರವಾಸಿಗರ ಸಂಖ್ಯೆ ಶೇ.30 ಅನ್ನು ಮೀರಿದೆ, ತಮಿಳುನಾಡು ಪ್ರವಾಸಿಗರ ಸಂಖ್ಯೆ ಶೇಕಡಾ ಹತ್ತಕ್ಕಿಂತ ಕೆಳಗೆ ಕುಸಿದಿದೆ ಎಂದು ಟಿಕೆಟ್ ಕೌಂಟರ್ ಉಸ್ತುವಾರಿ ಹೊತ್ತಿರುವ  ಆನಂದ್ ತಿಳಿಸಿದರು.

ಅನ್ ಲೈನ್ ವ್ಯವಸ್ಥೆ ಇರುವುದರಿಂದ ಟಿಕೆಟ್ ನೀಡಲು ಸ್ವಲ್ ವಿಳಂಬವಾದರೂ ವಾಹನ ಸವಾರರು ಗಲಾಟೆ ನಡೆಸುವರು. ಟಿಕೆಟ್ ತಪಾಸಣೆ ವೇಳೆ ಬೇಜವಾಬ್ದಾರಿಯಿಂದ ವರ್ತಿಸಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುತ್ತಿರುವುದರಿಂದ ಸಮಸ್ಯೆ ಉಂಟಾಗುವುದು. ಟಿಕೆಟ್ ಕಳೆದುಕೊಂಡವರು ಜಗಳಲ್ಲಕ್ಕೂ ನಿಲ್ಲುವುದುಂಟು. ಕಳೆದ ವಿಜಯದಶಮಿಯಂದು ಅತಿ ಹೆಚ್ಚು ವಾಹನಗಳು ಆಗಮಿಸಿ ಎಂ.ಜಿ. ರಸ್ತೆಯ ಇಟ್ಟಿಗೆಗೂಡು ಪಾರ್ಕಿಂಗ್ ಯಾರ್ಡ್ ಅಲ್ಲಿಯೂ ವಾಹನ ನಿಲ್ಲಿಸಲು ಸ್ಥಳವಿರಲಿಲ್ಲ. ಸಂಜೆ 7 ಗಂಟೆಗೆ ಎರಡು ಬಾರಿ ಪಾರ್ಕಿಂಗ್ ಕ್ಲೋಸಾಗಿತ್ತು. ದಸರಾ-ದೀಪಾವಳಿಯಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಅತಿ ಹೆಚ್ಚಾಗಿಯೇ ಇದೆ. ನೆರೆ ರಾಜ್ಯದಿಂದ ಹಳದಿ ಬೋರ್ಡಿಗಿಂತಲೂ ಬಿಳಿ ಬೋರ್ಡ್ ವಾಹನಗಳೇ ಹೆಚ್ಚಾಗಿ ಆಗಮಿಸಿವೆ.

ಸಂಭಾವನೆ:

ಸುಮಾರು ಇಪ್ಪತೈದಕ್ಕೂ ಅಧಿಕ ಮಂದಿ ಅರೆಕಾಲಿಕ ನೌಕರರಾಗಿ ಪಾರ್ಕಿಂಗ್ ಸೇರಿದಂತೆ ಸೆಕ್ಯೂರಿಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಳೆದ ವರ್ಷ ದಿನಕ್ಕೆ 220 ರೂ. ನೀಡಲಾಗುತ್ತಿತ್ತು. ಈ ಬಾರಿ ಸುಮಾರು ಐದರಿಂದ ಆರು ನೂರು ರೂ.ಗಳ ಸಂಭಾವನೆಯನ್ನು ಪ್ರತಿ ದಿನಕ್ಕೆ ನೀಡಲಾಗುವುದು ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಮದ್ಯಾಹ್ನ 3 ರಿಂದ ರಾತ್ರಿ 11 ರ ವರೆಗೆ ಕೊನೆಯ ವಾಹನ ತೆರವಾಗುವ ವರೆಗೂ ಜವಾಬ್ದಾರಿಯಿರುವುದು. ಇಲ್ಲಿನ ಮಣ್ಣಿನ ರಸ್ತೆಯಿಂದ ವಾಹನಗಳು ಚಲಿಸುವಾಗ ವಿಪರೀತ ಧೂಳುಮಯವಾಗಿ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಮಾಸ್ಕ್ ನೀಡಿದ್ದರೂ ಪ್ರತಿ ಕ್ಷಣ ಮಾಸ್ಕ್ ಹಾಕಿಕೊಂಡೇ ಇರಲಿಕ್ಕೆ ಆಗುವುದಿಲ್ಲ ಎನ್ನುವುದು ನೌಕರ ಪವನ್ ಅಳಲು.

ದೀಪಾವಳಿಯ ನಂತರದ ದಿನಗಳಲ್ಲಿ ಸ್ಥಳೀಯರೇ ಹೆಚ್ಚಿರುವರು ಎನ್ನುವ ಅನಿಸಿಕೆ ವ್ಯಕ್ತವಾಯಿತು. ಮನಸ್ಸಿಗೆ ಮುದ ನೀಡುವ ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ ಒಮ್ಮೆ ಕುಟುಂಬ ಸಮೇತರಾಗಿ ಭೇಟಿ ನೀಡಿ.

  • ರೇಖಾ ಪ್ರಕಾಶ್

Leave a Reply

comments

Related Articles

error: