ಮೈಸೂರು

ಮೈಸೂರು ಜಿಲ್ಲೆಯಲ್ಲಿ ನಾಲ್ಕು ದಿನ ಒಣಹವೆ: ಮಳೆ ಬೀಳುವ ಸಾಧ್ಯತೆ ಇಲ್ಲ

ಮೈಸೂರು ಜಿಲ್ಲೆಯಲ್ಲಿ ಇನ್ನು ನಾಲ್ಕು ದಿನಗಳ ಕಾಲ ಮಳೆಯಾಗುವ ಯಾವುದೇ ಮುನ್ಸೂಚನೆ ಇಲ್ಲ. ಮುಂದಿನ ನಾಲ್ಕು ದಿನಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಮಳೆಯಾಗುವುದಿಲ್ಲ ಎಂದು ನಾಗನಹಳ್ಳಿ ಸಂಶೋಧನಾ ಕೇಂದ್ರ ತಿಳಿಸಿದೆ.

ದಿನದ ಉಷ್ಣಾಂಶ 31 ರಿಂದ 32 ಡಿಗ್ರಿ ಸೆಲ್ಶಿಯಸ್, ರಾತ್ರಿಯ ವೇಳೆ 18 ಡಿಗ್ರಿ ಸೆಲ್ಶಿಯಸ್, ಬೆಳಗಿನ ತೇವಾಂಶ 92 ರಿಂದ 98 ಪರ್ಸೆಂಟ್, ಮಧ್ಯಾಹ್ನದ ಬಳಿಕದ ತೇವಾಂಶ 40 ರಿಂದ 48 ಪರ್ಸೆಂಟ್, ಗಾಳಿಯ ವೇಗ ಗಂಟೆಗೆ 2 ರಿಂದ 4 ಕಿ.ಮೀ. ನಿರೀಕ್ಷಿಸಬಹುದು.

ಕೆಲವು ತಾಲೂಕುಗಳಲ್ಲಿ ಭತ್ತದ ಫಸಲಿಗೆ ರೋಗ ಕಾಣಿಸಿಕೊಂಡಿರುವ ಕುರಿತು ವರದಿಯಾಗಿದ್ದು, ಒಂದು ಲೀಟರ್ ನೀರಿಗೆ ಒಂದು ಗ್ರಾಂ ಬವಿಸ್ಟಿನ್ ದ್ರಾವಣ ಸೇರಿಸಿ ಸಿಂಪಡಿಸಬೇಕು. ಇನ್ನು ನಾಲ್ಕು ದಿನಗಳ ಕಾಲ ಒಣ ಹವೆ ಮುಂದುವರಿಯಲಿದ್ದು, ರೈತರು ಕೃಷಿಗೆ ಹನಿ ನೀರಾವರಿ ನಡೆಸಬೇಕಿದೆ.

ಹವಾಮಾನ ಮುನ್ಸೂಚನೆ (ಅಕ್ಟೋಬರ 23 ರಿಂದ ಅಕ್ಟೋಬರ್ 26)

ಪಾರಾಮೀಟರ್23.10.201624.10.201625.10.201626.10.2016
ಮಳೆ(ಮಿ.ಮೀ.ಗಳಲ್ಲಿ)0000
ಗರಿಷ್ಠ ಉಷ್ಣಾಂಶ ಡಿ.ಸೆ.31313232
ಕನಿಷ್ಠ ಉಷ್ಣಾಂಶ ಡಿ.ಸೆ.18181818
ಮೋಡ ಪ್ರಮಾಣ (ಓಕ್ಟಾಸ್)
6763
ತೇವಾಂಶ(%) 08.30ಗಂಟೆಗಳಲ್ಲಿ95989794
ತೇವಾಂಶ(%) 17.30ಗಂಟೆಗಳಲ್ಲಿ40484641
ಗಾಳಿಯ ವೇಗ (ಕಿ.ಮೀ/ಗಂಟೆ)
3433
ಗಾಳಿಯ ದಿಕ್ಕು24026028090

Leave a Reply

comments

Related Articles

error: