ಮೈಸೂರು

ಪದವಿಪೂರ್ವ, ವೃತ್ತಿ ಶಿಕ್ಷಣ ಇಲಾಖೆ ವತಿಯಿಂದ ಉಚಿತ ಆಂಗ್ಲಭಾಷಾ ಕಲಿಕಾ ತರಗತಿ

ಮೈಸೂರು, ಆ.18 : ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ವತಿಯಿಂದ 2017-18ನೇ ಸಾಲಿಗೆ ಪದವಿ ಪೂರ್ವ ಶಿಕ್ಷಣದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಂಗ್ಲಭಾಷಾ ವಿಷಯದಲ್ಲಿ ವ್ಯಾಕರಣ ಹಾಗೂ ಮಾತನಾಡುವ ಕೌಶಲವನ್ನು ಉತ್ತಮಗೊಳಿಸಲು ಉಚಿತ ವಿಶೇಷ ತರಗತಿಗಳನ್ನು ಭಾನುವಾರದ ರಜಾ ದಿನಗಳಲ್ಲಿ ನಡೆಸಲಾಗುವುದು.

ಮೈಸೂರು ಜಿಲ್ಲೆಯ ಪ್ರತಿ ತಾಲ್ಲೂಕಿನ ಕ್ಲಸ್ಟರ್ ಕೇಂದ್ರಗಳಲ್ಲಿ, ಮೈಸೂರು ನಗರದಲ್ಲಿ ಮಹಾರಾಣಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಮೈಸೂರು ಪೀಪಲ್ಸ್ ಪಾರ್ಕ್, ನೂರಡಿ ರಸ್ತೆ ಮತ್ತು ಒಂಟಿಕೊಪ್ಪಲಿನಲ್ಲಿರುವ ಮಹಾರಾಜ ಪದವಿ ಪೂರ್ವ ಕಾಲೇಜು, ಮಂಚೇಗೌಡನಕೊಪ್ಪಲು ಹಾಗೂ ಕುವೆಂಪುನಗರದಲ್ಲಿರುವ ವಿಭಜಿತ ಮಹಾರಾಜ ಪದವಿ ಪೂರ್ವ ಕಾಲೇಜುಗಳಲ್ಲಿ ತರಗತಿ ನಡೆಯಲಿದೆ.

ಮೈಸೂರು ತಾಲ್ಲೂಕಿನ ವರುಣ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಿದ್ಧರಾಮನಹುಂಡಿ, ಇಲವಾಲ, ಹೆಚ್.ಡಿ.ಕೋಟೆ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜು, ನಂಜನಗೂಡು ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜು, ಟಿ.ನರಸೀಪುರ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು, ಬನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಣಸೂರು ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಿರಿಯಾಪಟ್ಟಣ ಬಾಲಕರ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಈ ಬೋಧನಾ ತರಗತಿಗಳನ್ನು ಆಂಗ್ಲಭಾಷಾ ವಿಷಯದಲ್ಲಿ ಎಂ.ಎ. ಹಾಗೂ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಪದವೀಧರರು ನಡೆಸಿಕೊಡಲಿದ್ದಾರೆ. ವಿದ್ಯಾರ್ಥಿಗಳು ತಮ್ಮ ಸಮೀಪದ ನೋಡಲ್ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡು ತರಗತಿಗಳಿಗೆ ಹಾಜರಾಗುವಂತೆ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: