ಮೈಸೂರು

ಚಾರ್ವೀಯಿಂದ ಆ.26ರಂದು ಸಿಡಿ ಬಿಡುಗಡೆ : ಸಂಗೀತ ಕಾರ್ಯಕ್ರಮ

ಮೈಸೂರು,ಆ.21 :  ಕಣಕಣವೂ ಸಂಗೀತ ಪ್ರತಿಕ್ಷಣವೂ ಸಂಗೀತ ಚಾರ್ವೀ ಸಂಸ್ಥೆಯ ವತಿಯಿಂದ ಸಿಡಿ ಬಿಡುಗಡೆ  ಹಾಗೂ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಡಿ.ಎನ್.ರಾಘವೇಂದ್ರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಚಾರ್ವೀ’ ಆಗಸ್ಟ್ 26 ರಂದು ಕಲಾಮಂದಿರದಲ್ಲಿ ಸಂಜೆ 6ಕ್ಕೆ,

ಸುನೀತಾ ರವರ ರಾಗ  ಸಂಯೋಜನೆಯನ್ನೊಳಗೊಂಡ  ಎಂ.ಎಸ್.ಲಕ್ಷ್ಮೀನಾರಾಯಣ ಭಟ್, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ದದ್ಯಾಂ, ಆ ನಯನ ಹಾಗೂ ಪು.ತಿ.ನರವರ ಪದ್ಯ ರೂಪಕದ ದೀಪಲಕ್ಷ್ಮೀ  ಈ ಮೂರು ಧ್ವನಿಸಾಂದ್ರಿಕೆಗಳು ಚಾರ್ವೀ ಮೂಲಕ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹಾಗೂ ಸ್ವಚ್ಛ ಭಾರತ ರೂವಾರಿಗಳಾದ ಎಚ್.ವಿ.ರಾಜೀವ್ ಉದ್ಘಾಟಿಸಲಿದ್ದಾರೆ. ಕವಿಯತ್ರಿ ಎಂ.ಆರ್.ಕಮಲಾ, ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಹಾಸ್ಯ ಕಲಾವಿದ ಪ್ರೋ.ಕೃಷ್ಣೇಗೌಡ ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.

ಇದೇ ಸಂದರ್ಭ ಕಲಾವಿದೆ ಸುನೀತಾ ಚಂದ್ರಕುಮಾರ್ ಮಾತನಾಡಿ  ಚಾರ್ವೀ ಹೊಸ ಗೀತ ಪ್ರಪಂಚಕ್ಕೆ ಮುನ್ನುಡಿ ಬರೆಯಲಿದ್ದು  ಉದ್ಘಾಟನೆಯ ನಂತರ ನನ್ನ ಶಿಷ್ಯ ವೃಂದದಿಂದ ಜನಪದ, ಶಾಸ್ತ್ರೀಯ, ಶಿಶುನಾಳ ಶರೀಪ್ರ 11 ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.  ಸಂಗೀತವೆನ್ನುವುದು ಒಂದು ಗಂಧರ್ವ ಕಲೆ. ಈ ಚಾರ್ವೀ ಲಘು ಸಂಗೀತದ ಅನೇಕ ಆಯಾಮಗಳ ಬಗ್ಗೆ ವಿಭಿನ್ನವಾಗಿಯೇ ಚಿಂತಿಸುವ ಆಲೋಚನೆ ಹೊಂದಿದ್ದು, ಇದನ್ನೆಲ್ಲ ಅನೇಕ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆಯನ್ನು ಈ ಸಂಸ್ಥೆ ಹೊಂದಿದೆ. ಸುನೀತರವರ ಸಾಂಗತ್ಯದಲ್ಲಿ ಚಾರ್ವೀ ಹುಟ್ಟು ತಳೆಯುತ್ತಿದೆ.ಸುಗಮ ಸಂಗೀತ ಕ್ಷೇತ್ರದ ಬೆಳವಣೆಗೆಯಲ್ಲಿ ಮಹಾದಾಶಯ ಹೊಂದಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಸಂಗೀತ ಪ್ರೀಯರು ಆಗಮಿಸಿ ಪ್ರೋತ್ಸಾಹಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಸುನೀತ ಹಾಗೂ ಶುಭ ರಾಘವೇಂದ್ರ ಹಾಜರಿದ್ದರು.⁠⁠⁠⁠ (ವರದಿ : ಕೆ.ಎಂ.ಆರ್)

Leave a Reply

comments

Related Articles

error: