
ದೇಶ(ಮುಂಬೈ)ಆ.21:- ಬಾಲಿವುಡ್ ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಭಾದ್ರಪದ ಮಾಸದ ಚೌತಿಯ ಸಂದರ್ಭ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಅದ್ಧೂರಿಯಿಂದ ಗಣೇಶನ ಚತುರ್ಥಿಯನ್ನು ಆಚರಿಸುತ್ತಿದ್ದರು. ಆದರೆ ಈ ಬಾರಿ ಆಚರಿಸುತ್ತಿಲ್ಲವಂತೆ.
ಬಾಂದ್ರಾದ ಗ್ಯಾಲೆಕ್ಸಿ ಅಪಾರ್ಟ್ ಮೆಂಟ್ ನಲ್ಲಿರುವ ಸಲ್ಮಾನ್ ಖಾನ್ ಮನೆಯಲ್ಲಿ ಕಳೆದ 14 ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸಿ ಅದ್ಧೂರಿಯಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಾರಂತೆ. ಅದಕ್ಕಾಗಿ ಎಲ್ಲರೂ ಅಲ್ಲಿಯೇ ತೆರಳಿ ಗಣೇಶನಿಗೆ ಪೂಜೆ ಸಲ್ಲಿಸಲಿದ್ದಾರಂತೆ. ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನಲ್ಲಿದ್ದಾಗಲೂ ಗಣೇಶನ ಮೂರ್ತಿ ಕುಳ್ಳಿರಿಸಿ ಪೂಜೆ ಆರಂಭಿಸಿದ್ದೇ ಸಲ್ಮಾನ್ ಸಹೋದರಿ ಅರ್ಪಿತಾ ಎನ್ನಲಾಗುತ್ತಿದೆ. ಈಬಾರಿ ಎಲ್ಲರೂ ಅಲ್ಲಿಗೇ ತೆರಳಿ ಹಬ್ಬ ಆಚರಿಸಲು ನಿರ್ಧರಿಸಿದ್ದಾರಂತೆ. (ಎಸ್.ಎಚ್)