ಮೈಸೂರು

ನಿವೇಶನಗಳ ಮಂಜೂರಾತಿ ಪತ್ರ ವಿತರಣೆ

ಮೈಸೂರು,ಆ.21-ದಿ ಮೈಸೂರು ಸಿಟಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ವತಿಯಿಂದ ತಾಲೂಕಿನ ಇಲವಾಲ ಹೋಬಳಿ ಹುಯಿಲಾಳು/ ಕೆ.ಹೆಮ್ಮನಹಳ್ಳಿ ಗ್ರಾಮದ ಬಡಾವಣೆಯಲ್ಲಿ ನಿವೇಶನಗಳ ವಿತರಣಾ ಸಮಾರಂಭ ಆಯೋಜಿಸಿದ್ದರು.

ಸಮಾರಂಭದಲ್ಲಿ ಹುಯಿಲಾಳು/ಕೆ.ಹೆಮ್ಮನಹಳ್ಳಿ ಗ್ರಾಮಗಳಲ್ಲಿ ನಿರ್ಮಿಸಿರುವ ಬಡಾವಣೆಯಲ್ಲಿನ ನಿವೇಶನದಾರರಿಗೆ ನಿವೇಶನಗಳ ಮಂಜೂರಾತಿ ಪತ್ರವನ್ನು ಮೆ.ಸ್ಕೈಟಾಪ್ ಬಿಲ್ಡರ್ಸ್ ಸಿಇಓ ಶ್ರೀಧರ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಡಿ.ನಾರಾಯಣ ಸ್ವಾಮಿ ನಾಯ್ಡು, ಉಪಾಧ್ಯಕ್ಷ ಬಿ.ನಾಗರಾಜು, ಕಾರ್ಯದರ್ಶಿ ಬಿ.ಎಸ್.ಶ್ರೀನಾಥ್ ಸೇರಿದಂತೆ ನಿರ್ದೇಶಕರಾದ ಮಂಜುನಾಥ್, ಡಿ.ದೊಡ್ಡಯ್ಯ, ಶಾರದಮ್ಮ ಇತರರು ಉಪಸ್ಥಿತರಿದ್ದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: