ಮೈಸೂರು

ಆ.೨೯ರಂದು ಮದ್ಯಪಾನ ಸಂಯಮ ಪ್ರಶಸ್ತಿ ಪ್ರದಾನ: ರುದ್ರಪ್ಪ 

ಮೈಸೂರು, ಆ.೨೧: ಆ.೨೯ರಂದು ಮೂರು ವರ್ಷಗಳಿಂದ ಬಾಕಿಯಿದ್ದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಲಾಮಂದಿರಲ್ಲಿ ಆಯೋಜಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮದ್ಯಪಾನ ಮಂಡಳಿಯ ಅಧ್ಯಕ್ಷ ಹೆಚ್.ಸಿ.ರುದ್ರಪ್ಪ ತಿಳಿಸಿದರು.

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುzಶಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ಇದೀಗ ಮೂರು ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದು, ೧೩-೧೪ನೇ ಸಾಲಿನ ಪ್ರಶಸ್ತಿಯನ್ನು ಡಾ.ಸಿ.ಹೆಚ್.ಚಂದ್ರಶೇಖರ್, ೧೪-೧೫ನೇ ಸಾಲಿನ ಪ್ರಶಸ್ತಿಯನ್ನು ನಿಂಗರಾಜ ಮಲ್ಲಾಡಿ ಹಾಗೂ ೧೫-೧೬ನೇ ಸಾಲಿನ ಪ್ರಶಸ್ತಿಯನ್ನು ಸದಾಶಿವಯ್ಯ ಅವರಿಗೆ ನೀಡಲಾಗುವುದು. ಪ್ರಶಸ್ತಿಯು ೧ ಲಕ್ಷ ನಗದು ಹಾಗೂ ಫಲಕವನ್ನು ಹೊಂದಿದೆ ಎಂದು ಹೇಳಿದರು.

೧೪ನೇ ಸಾಲಿನಲ್ಲಿ ೫೩೯ ಪ್ರಕರಣ, ೧೫ನೇ ಸಾಲಿನಲ್ಲಿ ೫೨೦ ಪ್ರಕರಣ ಹಾಗೂ ೧೬ನೇ ಸಾಲಿನಲ್ಲಿ ೭೫೯ ಮದ್ಯಪಾನ ಹಾಗೂ ಧೂಮಪಾನ ಪ್ರಕರಣಗಳು ದಾಖಲಾಗಿದ್ದು, ಈ ವರ್ಷದ ಜುಲೈವರೆಗೆ ೭೫ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಬೀದಿ ನಾಟಕಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್, ಮಂಡಳಿ ನಿರ್ದೇಶಕ ಚಂದ್ರಶೇಖರ್, ಜಿಪಂ ಸಿಇಓ ಶಿವಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: