ಸುದ್ದಿ ಸಂಕ್ಷಿಪ್ತ

ಆ.25ರಿಂದ ವರಸಿದ್ಧಿ ವಿನಾಯಕ ಮಹೋತ್ಸವ

ಮೈಸೂರು, ಆ.21 : ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ವರಸಿದ್ಧಿವಿನಾಯಕ ಮಹೋತ್ಸವವನ್ನು ಆ.25ರ ಗಣೇಶ ಚತುರ್ಥಿಯಿಂದ 11 ದಿನಗಳ ಕಾಲ ಆಯೋಜಿಸಲಾಗಿದೆ.

ಗಣೇಶ ಚತುರ್ಥಿಯಂದು ಬೆಳಗ್ಗೆ 11.30ಕ್ಕೆ ವಿನಾಯಕ ಪ್ರತಿಷ್ಠಾಪನೆ, ಅಷ್ಟಾವದಾನ, ಮಹಾಪಝೆ, ನೈವೇದ್ಯ, ಸುಮಂಗಲಿಯರಿಂದ ಆರತಿ ನಡೆಯುವುದು.

ಸಂಧ್ಯಾ ಸುರಕ್ಷಾ ಟ್ರಸ್ಟ್, ಬ್ರಾಹ್ಮಣ ಧರ್ಮ ಸಂಸ್ಕಾರ ಪ್ರತಿಷ್ಠಾನ, ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರೀಕ ವೇದಿಕೆಯ ಸಂಯುಕಾಶ್ರಯದಲ್ಲಿ ಹಮ್ಮಿಕೊಂಡಿರುವ ಮಹೋತ್ಸವದಲ್ಲಿ ಧಾರ್ಮಿಕ ಸಾಂಸ್ಕೃತಿ, ಹರಿಕಥೆ, ಹಾಡುಗಾರಿಕೆ ಭಜನೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು.(ಕೆ.ಎಂ.ಆರ್)

Leave a Reply

comments

Related Articles

error: