ದೇಶಪ್ರಮುಖ ಸುದ್ದಿವಿದೇಶ

ಭಾರತೀಯ ಸೇನೆಗೆ ಚಿನ್ನದ ಪದಕ

join-indian-armyಬ್ರಿಟಿಷ್ ಸೇನೆ ಆಯೋಜಿಸಿದ್ದ ವಿಶ್ವದ ಅತ್ಯಂತ ಕಠಿಣ ಯುದ್ಧ ಕೌಶಲ ಪ್ರದರ್ಶನದಲ್ಲಿ ಭಾರತೀಯ ಸೇನೆಯ ಗೋರ್ಖಾ ರೈಫಲ್ಸ್ ವಿಭಾಗಕ್ಕೆ ಚಿನ್ನದ ಪದಕ ಲಭಿಸಿದ್ದು ಭಾರತದ ಕೀರ್ತಿ ಪತಾಕೆಯನ್ನು ಯೋಧರು ವಿದೇಶದಲ್ಲೂ ಹಾರಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸೇನಾ ಗಸ್ತು ಕವಾಯಿತು ಕ್ಯಾಂಬ್ರಿಯನ್ ಪ್ಯಾಟ್ರೋಲ್ ಅನ್ನು ಬ್ರಿಟಿಷ್ ಸೇನೆ ಆಯೋಜಿಸಿತ್ತು.  ಜಗತ್ತಿನ ಅತ್ಯಂತ ಕಠಿಣ ಸಮರಾಭ್ಯಾಸ ಗಸ್ತು ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ 8ನೇ ಗೋರ್ಖಾ ರೈಫಲ್ಸ್ ವಿಭಾಗದ 2ನೇ ಬೆಟಾಲಿಯನ್ ನ ಎಂಟು ಯೋಧರು ಪಾಲ್ಗೊಂಡಿದ್ದರು.  ವೇಲ್ಸ್ ನ ಕ್ಯಾಂಬ್ರಿಯನ್ ಪರ್ವತ ಶ್ರೇಣಿಗಳಲ್ಲಿ ನಡೆಸುವಈ ಸೇನಾ ಕವಾಯತು ವಿಶ್ವದ ಅತ್ಯಂತ ಕಠಿಣ ಸೇನಾ ಪರೀಕ್ಷೆ ಎಂದೇ ಪರಿಗಣಿಸಲ್ಪಟ್ಟಿದೆ.

Leave a Reply

comments

Related Articles

error: