ಮೈಸೂರು

ಸಾಲ ಕೊಡಿಸುವುದಾಗಿ ಪಾಲಿಕೆ ನೌಕರನಿಂದ ಹಣ ವಸೂಲಿ : ಕ್ಯಾಮರಾದಲ್ಲಿ ಬಯಲು

ಮೈಸೂರು, ಆ.22:- ಸಾಲ ಕೊಡಿಸುವುದಾಗಿ ಪಾಲಿಕೆ ನೌಕರರೋರ್ವರು ಹಣ ವಸೂಲಿ ದಂಧೆಗಿಳಿದ ಪ್ರಕರಣ ಕ್ಯಾಮರಾದಲ್ಲಿ ಬಯಲಾಗಿದೆ.

ಪಾಲಿಕೆಯಿಂದ ಲೋನ್ ಕೊಡಿಸಬೇಕಾದರೆ ಇವರಿಗೆ ಹಣ ಕೊಡಬೇಕು. ಈ ಮನುಷ್ಯ  ದುಡ್ಡಿಲ್ಲದೆ ಯಾವ ಕೆಲಸವನ್ನು ಮಾಡುವುದಿಲ್ಲ.  ಮೈಸೂರು ಮಹಾನಗರ ಪಾಲಿಕೆ ನೌಕರ ಹಾಡಹಗಲೇ ಹಣ ವಸೂಲಿಗಿಳಿದಿದ್ದಾರೆ. ನಗರಪಾಲಿಕೆ ದ್ವಿತೀಯ ದರ್ಜೆ ನೌಕರ ಶಿವಕುಮಾರ್ ಹಣ ವಸೂಲಿ ಮಾಡುತ್ತಿದ್ದಾರೆ. ಕಮಿಷನ್ ಕೊಟ್ಟರೆ  ಮಾತ್ರ ಇಲ್ಲಿ ಕೆಲ್ಸದ ಮಾತು. ಹಾಡಹಗಲೇ ಜನರಿಂದ ಲೋನ್ ಕೊಡಿಸುವುದಾಗಿ ಹೇಳಿ ಹಣ ಪಡೆಯುತ್ತಿರುವುದು ಕ್ಯಾಮಾರಾದಲ್ಲಿ ಸೆರೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: