ಮೈಸೂರು

ವೈಭವ್ ಅನೆಕ್ಸ್ ಹೋಟೆಲ್ ಉದ್ಘಾಟನೆ

ಮೈಸೂರಿನ  ಆರ್‌ಟಿಓ ವೃತ್ತದ ಮಹಾತ್ಮಗಾಂಧಿ ರಸ್ತೆಯಲ್ಲಿ ನೂತನವಾಗಿ  ಆರಂಭವಾಗಿರುವ ವೈಭವ್ ಅನೆಕ್ಸ್ ಹೋಟೆಲ್ ಅನ್ನು ಭಾನುವಾರ ಮಾಜಿ ಸಚಿವ ಅಂಬರೀಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಾನು ಉದ್ಘಾಟಿಸಿದ ಹೋಟೆಲ್‌ಗಳೆಲ್ಲವೂ ನನ್ನದೆ ಎಂಬ ಭಾವನೆ ಜನರಿಗೆ ಬರುವುದು ಸಹಜ. ಆದರೆ, ಇದು ನನ್ನ ಹೋಟೆಲ್ ಅಲ್ಲ. ಸ್ನೇಹಿತರೊಬ್ಬರ ಹೋಟೆಲ್. ಅವರು ನನ್ನನ್ನು ಉದ್ಘಾಟನೆಗೆ ಕರೆದಿದ್ದ ಕಾರಣ ಬಂದು ಉದ್ಘಾಟಿಸಿದ್ದೇನೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದರು.

ಇದೇ ವೇಳೆ ಶ್ರೀನಿವಾಸ ಪ್ರಸಾದ್ ರಾಜೀನಾಮೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಶುಭ ಕಾರ್ಯಕ್ರಮದಲ್ಲಿ ರಾಜಕೀಯ ಬೇಡ. ನೀವು ನಾಳೆ ಬನ್ನಿ. ಎಲ್ಲವನ್ನೂ ಹೇಳುತ್ತೇನೆ. ಇಲ್ಲಿ ಯಾವುದೇ ಕಾರಣಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲವೆಂದು ನಿರಾಕರಿಸಿದರು. ಇದೇ ವೇಳೆ ಹೋಟೆಲ್ ಉದ್ಘಾಟನೆಯ ಕಾರ್ಯಕ್ರಮದಲ್ಲಿ ನಟ ಪ್ರೇಮ್ ಹಾಗೂ ಸತೀಶ್ ಅಂಬರೀಶ್‌ಗೆ ಸಾಥ್ ನೀಡಿದ್ದರು.

Leave a Reply

comments

Related Articles

error: