ಸುದ್ದಿ ಸಂಕ್ಷಿಪ್ತ

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ : ಅರ್ಜಿ ಆಹ್ವಾನ

ಮಂಡ್ಯ, ಆಗಸ್ಟ್ 22 : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಾಗಮಂಗಲ ತಾಲ್ಲೂಕಿನಲ್ಲಿ ವಾಸವಿದ್ದು ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವವರ ಪೋಷಕರ ಮಕ್ಕಳಿಗೆ ಭಾರತ ಸರ್ಕಾರದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್ ವಿಳಾಸ www.sw.kar.nic.in ನಲ್ಲಿ ಆನ್‍ಲೈನ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 30ಕೊನೆಯ ದಿನ.

ಅರ್ಜಿ ಸಲ್ಲಿಸಲು ಅನೈರ್ಮಲ್ಯ ವೃತ್ತಿಯಲ್ಲಿ ಪೋಷಕರು ತೊಡಗಿರುವುದಕ್ಕೆ ಪುರಾವೆಯಾಗಿ ಪಟ್ಟಣ ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿಯಿಂದ ಧೃಢೀಕರಣ ಪತ್ರ ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ನಾಗಮಂಗಲ ಇವರನ್ನು ಸಂಪರ್ಕಿಸಬಹುದು.

-ಎನ್.ಬಿ.

Leave a Reply

comments

Related Articles

error: