ಕರ್ನಾಟಕ

ತ್ರಿವಾಳಿ ತಲಾಖ್ ಅಂತಿಮ ತೀರ್ಮಾನ ಮುಸ್ಲಿಂ ಧಾರ್ಮಿಕ ಮುಖಂಡರಿಗೆ ಬಿಟ್ಟಿದ್ದು: ಎಚ್.ಡಿ.ದೇವೇಗೌಡ

ಗದಗ,ಆ.22-ತ್ರಿವಳಿ ತಲಾಖ್ ಅನ್ನೋದು ಧಾರ್ಮಿಕ ವಿಚಾರ. ಈ ಬಗ್ಗೆ ಅಂತಿಮ ತೀರ್ಮಾನ ಮುಸ್ಲಿಂ ಲಾ ಹಾಗೂ ಧಾರ್ಮಿಕ ಮುಖಂಡರಿಗೆ ಬಿಟ್ಟಿದ್ದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಖ್ ಅನ್ನೋದು ಧಾರ್ಮಿಕ ವಿಚಾರ ಅದನ್ನು ನಾವು ಪ್ರಶ್ನಿಸುವುದು ಎಷ್ಟು ಸರಿ. ತ್ರಿವಳಿ ತಲಾಕ್ ಕುರಿತು ಖುರಾನ್ ನಲ್ಲಿ ಪ್ರಾಸ್ತಾಪವಾಗಿಲ್ಲ ಅಂತ ಹೇಳಲಾಗ್ತಿದೆ. ತ್ರಿವಳಿ ತಲಾಖ್‍ ಅನ್ನು ಕೆಲ ಧಾರ್ಮಿಕ ಮುಖಂಡರು ಜಾರಿಗೆ ತಂದಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಈ ಬಗ್ಗೆ ಅಂತಿಮ ತೀರ್ಮಾನ ಮುಸ್ಲೀಂ ಲಾ ಹಾಗೂ ಧಾರ್ಮಿಕ ಮುಖಂಡರಿಗೆ ಬಿಟ್ಟಿದ್ದು ಎಂದಿದ್ದಾರೆ.

ವಿರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದ ಬಗ್ಗೆ ನೋಡಿ ನನಗೆ ಸಾಕಾಗಿ ಹೋಗಿದೆ. ನನಗೆ ಲಿಂಗಾಯತ ವಿರೋಧಿ ಅಂತ ಕೆಲವರು ಹಣೆ ಪಟ್ಟಿ ಕಟ್ಟಿದರು. ಲಿಂಗಾಯತ ವಿರೋಧಿ ಹಣೆಪಟ್ಟಿ ಕಟ್ಟಿದವರು ಯಾರು ಅಂತ ನಂಗೆ ಗೊತ್ತು. ಪ್ರತ್ಯೇಕ ಧರ್ಮ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ದೊಡ್ಡ, ದೊಡ್ಡ ಪೀಠಗಳಿವೆ. ವಿರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಧಾರ್ಮಿಕ ಮುಖಂಡ ನಿರ್ಧಾರಕ್ಕೆ ನಾನು ತಲೆಬಾಗುವೆ ಎಂದು ಹೇಳಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: