ಪ್ರಮುಖ ಸುದ್ದಿ

೩೦ರಂದು ವಿವಿಧ ಕಾಮಗಾರಿಗಳಿಗೆ ಚಾಲನೆ: ಎಪಿಎಂಸಿ ಸರ್ವ ಸದಸ್ಯರ ಸಭೆ 

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಆ.೨೨: ಆ ೩೦ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲೂಕಿಗೆ ಆಗಮಿಸಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಸಿದ್ದವಿರುವ ಕಾಮಗಾರಿಗಳ ಉದ್ಘಾಟನೆ ನೆರವೇರಿಸುವ ಹಿನ್ನೆಲೆಯಲ್ಲಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸರ್ವ ಸದಸ್ಯರ ಸಭೆ ನಡೆಯಿತು.

ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ, ಪಟ್ಟಣದ ಮಾರ್ಗವಾಗಿ ತೆರಕಣಾಂಬಿಗೆ ತೆರಳುವ ರಸ್ತೆಯನ್ನು ಮುಖ್ಯಮಂತ್ರಿಗಳಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ೨೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕುರಿ ಹಾಗೂ ಮೇಕೆಗಳ ಹರಾಜುಕಟ್ಟೆ, ೧೦ ಗೋದಾಮುಗಳು, ೧೦ ಹರಾಜುಕಟ್ಟೆಗಳು ಹಾಗೂ ತೆರಕಣಾಂಬಿಯಲ್ಲಿ ನಿರ್ಮಾಣವಾಗಿರುವ ೧೦೦೦ ಮೆಟ್ರಿಕ್ ಟನ್ ಗೋದಾಮುಗಳನ್ನು ಉದ್ಘಾಟನೆ ಮಾಡಿಸಲಾಗುವುದು. ಇದಕ್ಕಾಗಿ ಎಲ್ಲಾ ರೀತಿಯಲ್ಲಿಯೂ ಸಿದ್ದತೆಗಳನ್ನು ಮಾಡಬೇಕಾಗಿದೆ ಎಂದು ವಿವರಿಸಿದರು. ನಂತರ ರೈತರು ಹಾಗೂ ವರ್ತಕರ ಕುಂದುಕೊರತೆ ಸಭೆ ನಡೆಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ನಾಗಮಣಿ, ಸದಸ್ಯರಾದ ಎಂ.ಸುಜೀಂದ್ರ, ಜಿ.ಮಡಿವಾಳಪ್ಪ, ಕೆ.ಎಂ.ಪ್ರಭುಸ್ವಾಮಿ, ಶಿವನಾಗಪ್ಪ, ಗುರುಸ್ವಾಮಿ, ಶಿವಮಾದಪ್ಪ, ಮಂಜುಳಾ, ರತ್ನಮ್ಮ, ದೊಡ್ಡೇಗೌಡ, ಕಾರ್ಯದರ್ಶಿ ಎಂ.ರಘು, ಮಾರುಕಟ್ಟೆ ಅಧಿಕಾರಿ ಶಿವಬಸವಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

 

Leave a Reply

comments

Related Articles

error: