ಸುದ್ದಿ ಸಂಕ್ಷಿಪ್ತ

ಮಡಿಕೇರಿ ದಸರಾ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತಾಗಲು ಸಹಕರಿಸಿ

ಮಡಿಕೇರಿ, ಆ.22: ಮಡಿಕೇರಿ ಐತಿಹಾಸಿಕ ದಸರಾ ಕಾರ್ಯಕ್ರಮಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಲು ಅವಕಾಶ ಮಾಡುವಂತೆ ಜಿಲ್ಲಾಧಿಕಾರಿಯವರಲ್ಲಿ ಮಡಿಕೇರಿ ದಸರಾ ಸಮಿತಿ ಮನವಿ ಮಾಡಿದೆ. ಈಗಾಗಲೇ ಐತಿಹಾಸಿಕ ಮಡಿಕೇರಿ ದಸರಾ ಕಾರ್ಯಕ್ರಮಗಳ ಸಿದ್ಧತೆಗಳು ಆರಂಭವಾಗಿದ್ದು, ವಿಶ್ವ ವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ರಜೆ ನೀಡುವಂತೆ, ಕೊಡಗು ಜಿಲ್ಲೆಯಲ್ಲಿಯೂ ಶಾಲಾ-ಕಾಲೇಜುಗಳಿಗೆ ರಜೆ ನೀಡುವಂತಾಗಬೇಕು ಎಂದು ದಸರಾ ಸಮಿತಿ ಕಾರ್ಯಧ್ಯಕ್ಷರಾದ ಮಹೇಶ್ ಜೈನಿ ಮತ್ತು ಸದಸ್ಯರು ಕೋರಿದ್ದಾರೆ. ಮಕ್ಕಳ ದಸರಾ, ಮಕ್ಕಳ ಸಂತೆ, ಯುವ ದಸರಾ, ಕ್ರೀಡಾ ದಸರಾ ಹಾಗೂ ಮಹಿಳಾ ದಸರಾದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತಾಗಬೇಕು. ಆ ನಿಟ್ಟಿನಲ್ಲಿ ಸೆಪ್ಟೆಂಬರ್ 20 ರೊಳಗೆ ಮಧ್ಯಾಂತರ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಮಡಿಕೇರಿ ಜನೋತ್ಸವ ದಸರಾ ಸಮಿತಿಯು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಲ್ಲಿ ಮನವಿ ಮಾಡಿದೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: