ಸುದ್ದಿ ಸಂಕ್ಷಿಪ್ತ

ಪ್ರತಿಭಾನ್ವಿತರಿಗೆ ಬಹುಮಾನ ವಿತರಣೆ

 ಮಡಿಕೇರಿ ಆ.22 :-ವಿರಾಜಪೇಟೆಯ ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ಸ್ ಮತ್ತು ಮುದ್ರಣಾಲಯದ ವತಿಯಿಂದ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರುಗಳ ಪ್ರತಿಭಾವಂತ ಮಕ್ಕಳಿಗೆ ಸೆಪ್ಟೆಂಬರ್ 24 ರಂದು ನಡೆಯುವ ಸಂಘದ ಮಹಾಸಭೆಯಲ್ಲಿ ಬಹುಮಾನ ನೀಡಲಾಗುವುದು. ಸದಸ್ಯರು ಅತಿ ಹೆಚ್ಚು ಅಂಕ ಗಳಿಸಿದ ತಮ್ಮ ಮಕ್ಕಳ ಅಂಕಪಟ್ಟಿಯ ದೃಡೀಕೃತ ಪ್ರತಿಯನ್ನು ಸೆಪ್ಟೆಂಬರ್ 15 ರೊಳಗೆ ಸಂಘಕ್ಕೆ ಸಲ್ಲಿಸಲು ಕೊಡಗು ಉಪಾಧ್ಯಾಯರ ಸಹಕಾರ ಸ್ಟೋರ್ಸ್ ಮತ್ತು ಮುದ್ರಣಾಲಯ ನಿಯಮಿತದ ವ್ಯವಸ್ಥಾಪಕರು ಕೋರಿದ್ದಾರೆ.(ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: