ಮೈಸೂರು

ರಾಜ್ಯ ಮುಕ್ತ ವಿವಿ ಅಂಕಪಟ್ಟಿ ಹಗರಣ : 850 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟದಲ್ಲಿ

ಮೈಸೂರು,ಆ.23:- ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಅಂಕಪಟ್ಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 850 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ.

ಅಂಕಪಟ್ಟಿಗಳು ಹಳೆಯ 500, 1000 ನೋಟಿನಂತಾಗಿದ್ದು, ಮಾನ್ಯತೆ ಇಲ್ಲದಂತಾಗಿದೆ. ಬ್ರಿಡ್ಜ್ ಕೋರ್ಸ್ ಪಡೆದ ವಿದ್ಯಾರ್ಥಿಗಳು ಹಾಗೂ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದಾರೆ. ಜಿಸಿಎಂಸಿ ಕಾಲೇಜು, ಶ್ರೀಮೇಧಾ ಕಾಲೇಜು, ಇಂಡೋ ಅಮೇರಿಕನ್ ಕಾಲೇಜು ಸೇರಿದಂತೆ ಧಾರವಾಡದ ನೂರಾರು ವಿದ್ಯಾರ್ಥಿಗಳು ಮುಕ್ತವಿಶ್ವವಿದ್ಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಅಂಕಪಟ್ಟಿಗಳ ನೈಜತೆ ಕುರಿತು ಪರಿಶೀಲನೆಗೆ ಕೋರ್ಟ್ ಆದೇಶಿಸಿದೆ. ನಾಲ್ಕು ಸೆಮ್ ಓದಿದ ವಿದ್ಯಾರ್ಥಿಗಳಿಗೆ 5 ನೇ ಸೆಮ್ ಗೆ ಪ್ರವೇಶಾತಿಗೆ‌ ನಿರಾಕರಿಸಲಾಗಿದೆ. ಕೆ‌ಎಸ್ ಓಯು ಅಂಕಪಟ್ಟಿಗೆ ಮಾನ್ಯತೆ ಇಲ್ಲದ ಕಾರಣ ಪ್ರವೇಶಾತಿ ಸಾಧ್ಯವಿಲ್ಲ ಎಂದು ಕಾಲೇಜುಗಳು ತಿಳಿಸಿವೆ. ಅಂತಿಮ ಬಿಕಾಂ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಎರಡು ವರ್ಷ ಇಲ್ಲದ ಸಮಸ್ಯೆ ಮೂರನೇ ವರ್ಷ ಉದ್ಭವವಾಗಿದೆ. ಮಾನ್ಯತೆ ಕಳೆದುಕೊಂಡಿರುವ ಕಾರಣ ಪ್ರವೇಶಾತಿ ಇಲ್ಲವಾಗಿದೆ. ಪ್ರವೇಶಾತಿ ನೀಡುವಂತೆ ವಿದ್ಯಾರ್ಥಿಗಳು ಕೋರ್ಟ್ ಮೊರೆ ಹೋಗಿದ್ದಾರೆ. ಅಂಕಪಟ್ಟಿಯ ನೈಜತೆ, ಸತ್ಯಾಸತ್ಯತೆಗೆ ಕೋರ್ಟ್ ಆದೇಶಿಸಿದೆ. ಬ್ರಿಡ್ಜ್ ಕೋರ್ಸ್ ಆಧಾರದ ಮೇಲೆ ಪ್ರವೇಶಾತಿ ಸಾಧ್ಯವಿಲ್ಲ ಎಂದು ಸಂಸ್ಥೆಗಳು ತಿಳಿಸಿವೆ. ಕೆ ಎಸ್ ಓ ಯು ಸಿಬ್ಬಂದಿ ಇದನ್ನೇ ಪುಷ್ಠಿಕರೀಸಲಿದ್ದಾರೆ. ಹಿಂದಿನ ಕುಲಪತಿಗಳ ನಡೆಗೆ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ವಾಗಿದೆ. ನ್ಯಾಯಾಲಯ ಆದೇಶಿಸಿದರೂ ನ್ಯಾಯ ಸಿಗುತ್ತಿಲ್ಲ. ಬ್ರಿಡ್ಜ್ ಕೋರ್ಸ್ ಮಾನ್ಯತೆ ಇಲ್ಲದಿರುವುದು ಒಂದೆಡೆಯಾದರೆ, ಕೆ ಎಸ್ ಓಯುಗೆ ಮಾನ್ಯತೆ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: