ಮೈಸೂರು

ಕರಾಮುವಿ ಅಂಕಪಟ್ಟಿ ಹಗರಣ : ಸಿಸಿಬಿ ಪೊಲೀಸರಿಂದ ತೀವ್ರ ವಿಚಾರಣೆ

ಮೈಸೂರು,ಆ.23:-  ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅಂಕಪಟ್ಟಿ ಹಗರಣ ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ಮೈಸೂರಿನ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಮುಂದಾಗಿದ್ದಾರೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ  ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಹರ್ಷಾ, ಪ್ರಶಾಂತ್, ಲೋಕೇಶ್ ಹಾಗೂ ಚಂದ್ರಶೇಖರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಚಂದ್ರಶೇಖರ್, ಕೆಎಸ್ಓಯು ನಿವೃತ್ತ ನೌಕರನಾಗಿದ್ದು,
ಮುಕ್ತ ವಿವಿಯ ಪರೀಕ್ಷಾಂಗ ವಿಭಾಗದಲ್ಲಿ ಕೋ ಆರ್ಡಿನೇಟರ್ ಆಗಿದ್ದರು. ಉಳಿದ ಮೂವರು  ಕೂಡ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ‌ ಕೆಲಸ ಮಾಡುತ್ತಿರುವ ನೌಕರರು ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: