ಮೈಸೂರು

ಸೀಡ್ ಬಾಲ್ ಗಣಪತಿಯ ವಿಗ್ರಹಗಳನ್ನು ವಿತರಿಸಿದ ಶಾಸಕ ಸೋಮಶೇಖರ್

ಮೈಸೂರು, ಆ.23:- ಲಯನ್ಸ್ ಕ್ಲಬ್ ಸೌತ್ ಡಿವಿಜನ್ ವತಿಯಿಂದ ಕುವೆಂಪುನಗರದ ಎ ಟು ಝಡ್ ಬಳಿ ಶಾಸಕ ಎಂ.ಕೆ.ಸೋಮಶೇಖರ್  ಸೀಡ್ ಬಾಲ್ ಗಣಪತಿಯ ವಿಗ್ರಹಗಳನ್ನು ಉಚಿತವಾಗಿ ವಿತರಿಸಿದರು.

ಈ ಸಂದರ್ಭ ಮಾತನಾಡಿದ  ಶಾಸಕ ಎಂ.ಕೆ.ಸೋಮಶೇಖರ್ ಲಯನ್ಸ್ ಕ್ಲಬ್  ವತಿಯಿಂದ ಸೀಡ್ ಬಾಲ್ ಗಣಪತಿಯ ವಿಗ್ರಹಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ. ಈ ಸಂಸ್ಥೆ ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬಂದಿದೆ. ಪ್ಲಾಸ್ಟಿಕ್ ಬ್ಯಾನ್ ಆದ ನಂತರ ಬಟ್ಟೆಗಳ ಬ್ಯಾಗ್ ಹೊಲಿಯಲು ಅವಕಾಶ ಮಾಡಿಕೊಟ್ಟು ನಿರುದ್ಯೋಗಿಗಳಾಗದಂತೆ ಮಾಡಿದ್ದಾರೆ ಎಂದರು.  ಸಾವಿರಕ್ಕೂ ಅಧಿಕ ವಿಗ್ರಹಗಳನ್ನು ವಿತರಿಸಲಾಯಿತು.  ಈ ಸಂದರ್ಭ ಲಯನ್ಸ್ ಕ್ಲಬ್ ನ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ನಗರದ ಕೋಟೆ ಆಂಜನೇಯ ದೇವಸ್ಥಾನದ ಬಳಿಯೂ ವಿವಿಧ ಪರಿಸರ ಸ್ನೇಹಿ ಸಂಘಟನೆಗಳ ವತಿಯಿಂದ ಸೀಡ್ ಬಾಲ್ ಗಣಪತಿಯ ವಿಗ್ರಹಗಳ ವಿತರಣೆ ನಡೆಯಿತು. ರಾಸಾಯನಿಕ ಬಳಸಿ ತಯಾರಿಸಲಾದ ಗಣಪತಿಯ ವಿಗ್ರಹ ಬಳಕೆಗಿಂತ ಪರಿಸರಕ್ಕೆ ಹಾನಿಯಾಗದ ಪರಿಸರವನ್ನು ಬೆಳೆಸುವ ಸೀಡ್ ಬಾಲ್ ಗಣಪತಿಯ ವಿಗ್ರಹಕ್ಕೆ ಮೈಸೂರು ಜನತೆ ಮಾರು ಹೋಗಿದ್ದು, ಸೀಡ್ ಬಾಲ್ ಕೊಳ್ಳಲು ಮುಂದಾಗಿರುವುದು ಕಂಡು ಬಂತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: