ಪ್ರಮುಖ ಸುದ್ದಿ

ವಾದ್ರಾ ಹಗರಣಗಳ ತನಿಖೆ ಮಾಡುವಂತೆ ಸಿಬಿಐಗೆ ರಾಜಸ್ಥಾನ ಸರ್ಕಾರ ಮನವಿ 

ಪ್ರಮುಖ ಸುದ್ದಿ, ಜೈಪುರ, ಆ.೨೩: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಭಾಗಿಯಾಗಿದ್ದಾರೆ ಎನ್ನಲಾದ ಬಿಕಾನೇರ್ ಭೂ ಕಬಳಿಕೆ ಹಗರಣ ಮತ್ತು ಹಣ ದುರುಪಯೋಗ ಹಗರಣದ ತನಿಖೆ ನಡೆಸುವಂತೆ ರಾಜಸ್ಥಾನ ಸರ್ಕಾರ ಸಿಬಿಐಗೆ ಮನವಿ ಮಾಡಿಕೊಂಡಿದ್ದು ಶೀಘ್ರದಲ್ಲೇ ತನಿಖೆ ಆರಂಭವಾಗಲಿದೆ ಎನ್ನಲಾಗಿದೆ.

ರಾಜಸ್ಥಾನ ಸರಕಾರ, ರಾಬರ್ಟ್ ವಾದ್ರಾ ಹಗರಣಗಳ ತನಿಖೆಯನ್ನು ನಡೆಸುವಂತೆ ಸಿಬಿಐ ಅನ್ನು ಕೇಳಿಕೊಂಡಿದೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ತಿಳಿಸಿದ್ದಾರೆ. ವಾದ್ರಾ ಹಗರಣಗಳು ಸಂಕೀರ್ಣ ಸ್ವರೂಪದ್ದಾಗಿವೆ ಮತ್ತು ಹಲವು ವರ್ಷಗಳ ಅವಧಿಗೆ ಅವು ಹರಡಿಕೊಂಡಿವೆ. ನಾವು ಈ ಹಗರಣಗಳ ಬಗ್ಗೆ ನಮ್ಮ ಕಡೆಯಿಂದ ತನಿಖೆ ನಡೆಸಿzವೆ. ಅನೇಕರನ್ನೂ ಬಂಧಿಸಿzವೆ. ಆದರೆ ಈ ಒಟ್ಟು ಹಗರಣಗಳ ಸಮಗ್ರ ತನಿಖೆಯನ್ನು ಸಿಬಿಐ ನಡೆಸುವುದೇ ಒಳಿತೆಂದು ತೀರ್ಮಾನಿಸಿzವೆ. ಅಂತೆಯೇ ಸಿಬಿಐ ಅನ್ನು ಕೇಳಿಕೊಂಡಿzವೆ ಎಂದು ಕಟಾರಿಯಾ ತಿಳಿಸಿದ್ದಾರೆ. ಒಂದು ವೇಳೆ ರಾಜಸ್ಥಾನ ಮನವಿಯನ್ನು ಪುರಸ್ಕರಿಸಿ ಸಿಬಿಐ ತನಿಖೆ ಆರಂಭಿಸಿದರೆ ಅದಿನಾಯಕಿ ಸೋನಿಯಾಗಾಂಧಿ ಅಳಿಯನಿಗೆ ಸಂಕಷ್ಟ ಎದುರಾಗಲಿದೆ. (ವರದಿ ಬಿ.ಎಂ)

 

Leave a Reply

comments

Related Articles

error: