ಮನರಂಜನೆ

ನದಿ ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ಸ್ಯಾಂಡಲ್‍ವುಡ್ ನಟ

ಬೆಂಗಳೂರು,ಆಗಸ್ಟ್.23:  ‘ಕಿರಿಕ್ ಪಾರ್ಟಿ’ ಯಶಸ್ಸಿನ ಬಳಿಕ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವ  ಸ್ಯಾಂಡಲ್ ವುಡ್  ನಟ ರಕ್ಷಿತ್ ಶೆಟ್ಟಿ.

ಕಲಾವಿದರು ಸಿನಿಮಾದಲ್ಲಿ ಬ್ಯುಸಿಯಾಗಿದ್ದರುಆ ಕೂಡ  ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿವ ಮೂಲಕವೂ  ಗಮನ ಸೆಳೆಯುತ್ತಿದ್ದಾರೆ. ಹೌದು ನಟ ರಕ್ಷಿತ್ ಶೆಟ್ಟಿ ‘ನದಿ ಉಳಿಸಿ ಅಭಿಯಾನ’ಕ್ಕೆ ಕೈ ಜೋಡಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಫೇಸ್ ಬುಕ್ ಪೇಜ್‍ನಲ್ಲಿ ನದಿ ಉಳಿಸಬಹುದಾದ ಅಗತ್ಯತೆ ಬಗ್ಗೆ ಹೇಳಿಕೊಂಡಿದ್ದಾರೆ. ದೇಶದ ಶೇ. 25 ರಷ್ಟು ಭೂ ಭಾಗ ಮರುಭೂಮಿಯಾಗಿ ಬದಲಾಗುತ್ತಿರುವುದು ನಿಮಗೆ ಗೊತ್ತೇ ಇದೆ. ನದಿ ಉಳಿಸುವ ಅಭಿಯಾನದಲ್ಲಿ ನೀವೂ 80009 80009 ಈ ನಂಬರ್‍ಗೆ ಮಿಸ್ಡ್ ಕಾಲ್ ಕೊಟ್ಟು ನದಿ ಉಳಿಸಿ ಅಭಿಯಾನದಲ್ಲಿ ಭಾಗಿಯಾಗಿರಿ ಎಂದು ಬರೆದುಕೊಂಡಿದ್ದಾರೆ. ( ವರದಿ: ಪಿ.ಜೆ )

Leave a Reply

comments

Related Articles

error: