ದೇಶಪ್ರಮುಖ ಸುದ್ದಿ

ಸೆಪ್ಟೆಂಬರ್ ನಲ್ಲಿ ಚಲಾವಣೆಗೆ ಬರಲಿದೆ 200 ರೂ.ನ ನೋಟು

ಮುಂಬೈ,ಆ.23-ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 200 ರೂ. ನೋಟುಗಳ ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದ್ದು, ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ 200 ರೂ. ಗಳ ನೋಟುಗಳು ಚಲಾವಣೆಗೆ ಬರಲಿದೆ ಎಂದು ಮೂಲಗಳು ಹೇಳಿವೆ.

ನಕಲಿ ನೋಟುಗಳ ಹಾವಳಿ, ಕಾಳ ದಂಧೆಯನ್ನು ತಪ್ಪಿಸಲು ರಿಸರ್ವ್ ಬ್ಯಾಂಕ್ ಹೊಸ ನೋಟುಗಳನ್ನು ಚಲಾವಣೆಗೆ ತರಲು ಮುಂದಾಗಿದೆ. ಇತ್ತೀಚೆಗೆ ಆರ್ ಬಿಐ 500 ರೂ. ಹಾಗೂ 1000 ರೂ.ಗಳ ಹೊಸ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. 100 ರೂ. ಹಾಗೂ 500 ರೂ.ಗಳ ಮಧ್ಯೆ ಯಾವುದೇ ಮುಖಬೆಲೆಯ ನೋಟುಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ 200 ರೂ.ಗಳ ನೋಟುಗಳನ್ನು ಚಲಾವಣೆಗೆ ತರಲಾಗುತ್ತಿದೆ. ಈ ನೋಟುಗಳು ಎಲ್ಲಿರಗೂ ದೊರಕುವಂತೆ ಪ್ಲಾನ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ 50 ಕೋಟಿಗೂ ಅಧಿಕ ನೂತನ 200 ರೂ. ನೋಟುಗಳನ್ನು ಆರ್ ಬಿಐ ಮುದ್ರಿಸಿದೆ. (ವರದಿ-ಎಂ.ಎನ್)

Leave a Reply

comments

Related Articles

error: