ಮೈಸೂರು

ಆ.27ರಂದು ಸಾಮೂಹಿಕ ವಿನಾಯಕ ವಿಸರ್ಜನಾ ಮಂಡಳಿಯಿಂದ ಭವ್ಯ ಗಣಪತಿ ಮೆರವಣಿಗೆ

ಮೈಸೂರು,ಆ.23 : ರಾಷ್ಟ್ರೀಯ ಚಿಂತನೆ ಮತ್ತು ಸಮಾನತೆಗಳನ್ನು ಜಾಗೃತಗೊಳಿಸಲು ಕಳೆದ 14 ವರ್ಷಗಳಿಂದ ಮೈಸೂರು ನಗರ ಸಾಮೂಹಿಕ ವಿನಾಯಕ ವಿಸರ್ಜನಾ ಮಂಡಳಿಯಿಂದ  ಮೈಸೂರಿನಾಧ್ಯಂತ ಗಣಪತಿಗಳ ಸಾಮೂಹಿಕ ಬೃಹತ್ ಮೆರವಣಿಗೆ ಮತ್ತು ವಿಸರ್ಜನಾ  ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದೇವೆ ಎಂದು ಮಂಡಳಿಯ ಸಂಚಾಲಕ ಮುರಳೀಧರನ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನಲ್ಲಿಯೂ ಆಗಸ್ಟ್ 27 ರಂದುಮಧ್ಯಾಹ್ನ 3 ಗಂಟೆಗೆ  ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಸಾಮೂಹಿಕ ಭವ್ಯ ಮೆರವಣಿಗೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡುವರು, ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಂಯೋಜಕ ಕೆ.ಟಿ.ಉಲ್ಲಾಸ್ ಭಾಗವಹಿಸುವರು ಎಂದು ತಿಳಿಸಿದರು.

ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸುವ ವಿನಾಯಕನ ಮೂರ್ತಿಗಳನ್ನು ವೀರನಗೆರೆಯ ಶ್ರೀ ವೀರಗಣಪತಿ ದೇವಸ್ಥಾನದ ಮುಂಭಾಗದಿಂದ ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಮೆರವಣಿಗೆಯಲ್ಲಿ ವಿವಿಧ ಆಕರ್ಷಕ ಸಾಂಸ್ಕೃತಿಕ, ಜಾನಪದ ಮತ್ತು ಇನ್ನಿತರ ಕಲಾತಂಡಗಳು ಭಾಗವಹಿಸಲಿವೆ. ಕೋಟೆ ಆಂಜನೇಯ ದೇವಸ್ಥಾನದಿಂದ  ಆರಂಭವಾಗುವ ಮೆರವಣಿಗೆಯೂ ನಗರದ ದೊಡ್ಡ ಗಡಿಯಾರದಿಂದ, ದೇವರಾಜ ಅರಸು ರಸ್ತೆ ಮುಖಾಂತರ ನಾರಾಯಣ ಶಾಸ್ತ್ರ ರಸ್ತೆ, ಸಂಸ್ಕೃತ ಪಾಠಶಾಲೆ ವೃತ್ತದಲ್ಲಿ ಸಾಗುವುದು ಎಂದು ವಿವರಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ಮೊಹಲ್ಲಾಗಳ ಗಣಪತಿ ಮಂಡಳಿಗಳು ಈ ಸಾಮರಸ್ಯದ ಹಿಂದೂ ಐಕ್ಯತೆ ಪ್ರತೀಕವಾದ ಮೆರವಣಿಗೆಯಲ್ಲಿ ಭಾಗವಹಿಸಬಹುದಾಗಿ ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ, ಮೈ.ಕಾ.ಪ್ರೇಮ್ ಕುಮಾರ್, ಚೇತನ್ ಮಂಜುನಾಥ್ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: