ದೇಶಪ್ರಮುಖ ಸುದ್ದಿ

ರೈಲ್ವೇ ಮಂಡಳಿಯ ಅಧ್ಯಕ್ಷ ಅಶೋಕ್ ಕುಮಾರ್ ಮಿತ್ತಲ್ ರಾಜೀನಾಮೆ

ದೇಶ(ನವದೆಹಲಿ)ಆ.23:- ಉತ್ತರ ಪ್ರದೇಶದಲ್ಲಿ ನಡೆದ ರೈಲು ಸರಣಿ ಅಪಘಾತದ ಬೆನ್ನಲ್ಲೇ ರೈಲ್ವೇ ಮಂಡಳಿಯ ಅಧ್ಯಕ್ಷ ಅಶೋಕ್ ಕುಮಾರ್ ಮಿತ್ತಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಿತ್ತಲ್ ಅವರು ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ರಾಜೀನಾಮೆ ಸಲ್ಲಿಸಿದರು. ಆದರೆ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆಯೋ ಇಲ್ಲವೋ ಎನ್ನುವ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಅವರು ತಮ್ಮ ವೈಯುಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ರೈಲು ದುರ್ಘಟನೆ ಕೇವಲ 5ದಿನಗಳ ಅಂತರದಲ್ಲಿ ನಡೆದಿದ್ದು, ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆ.19ರಂದು ಮುಜ್ಫರ್ ನಗರದಲ್ಲಿ ನಡೆದ ಕಳಿಂಗ ಉತ್ಕಲ ಎಕ್ಸಪ್ರೆಸ್ ಹಳಿ ತಪ್ಪಿ 23 ಜನರ ಸಾವು ಹಾಗೂ ಬುಧವಾರ ನಡೆದ ಕೈಫಿಯತ್ ಎಕ್ಸಪ್ರೆಸ್ ರೈಲು ದುರಂತ ನಡೆದಿದೆ. ದುರಂತದಲ್ಲಿ  50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು,  ಹಾಗೂ 26 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಅದರ ಬೆನ್ನಲ್ಲೇ ಮಿತ್ತಲ್ ರಾಜೀನಾಮೆ ನೀಡಿದ್ದಾರೆ. (ಎಸ್.ಎಚ್)

Leave a Reply

comments

Related Articles

error: