ಪ್ರಮುಖ ಸುದ್ದಿ

ರೈಲು ಅಪಘಾತಗಳಿಂದ ಮನನೊಂದು ರಾಜೀನಾಮೆಗೆ ಮುಂದಾದ ಸುರೇಶ್‌ಪ್ರಭು 

ಪ್ರಮುಖ ಸುದ್ದಿ, ನವದೆಹಲಿ, ಆ.೨೩: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಸಂಭವಿಸುತ್ತಿರುವ ರೈಲು ಅಪಘಾತಗಳಿಂದ ಬೇಸತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ತಡೆಯೊಡ್ಡಿದ್ದಾರೆ.

ಉತ್ಕಲ್ ಎಕ್ಸ್ ಪ್ರೆಸ್ ರೈಲು ಅಪಘಾತದ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಇಂದು ಸಂಭವಿಸಿದ ಕೈಫಿಯತ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ೭೪ ಮಂದಿ ಗಾಯಗೊಂಡಿರುವುದರಿಂದ ಮನನೊಂದಿರುವ ಸಚಿವ ಸುರೇಶ್ ಪ್ರಭು ರಾಜೀನಾಮೆ ನೀಡಲು ಮುಂದಾಗಿದ್ದು, ರಾಜೀನಾಮೆ ನೀಡಲು ನಿರ್ಧರಿಸಿರುವ ಬಗ್ಗೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.  ಸರಣಿ ರೈಲು ಅಪಘಾತಗಳಿಂದ ಮನನೊಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸ್ವಲ್ಪದಿನ ಕಾಯುವಂತೆ ಸೂಚನೆ ನೀಡಿದ್ದಾರೆ ಎಂದು ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

ಕಳೆದ ೩ ವರ್ಷಗಳಲ್ಲಿ ನಾನು ರೈಲ್ವೆ ಇಲಾಖೆಯ ಅಭಿವೃದ್ಧಿ, ಆಧುನೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶ್ರಮಿಸಿzನೆ. ದಶಕಗಳ ನಿರ್ಲಕ್ಷ್ಯಗಳನ್ನು ಸರಿಪಡಿಸಲು ಯತ್ನಿಸಿzನೆ. ಇದೇ ಮಾರ್ಗದಲ್ಲಿ ರೈಲ್ವೆ ಇಲಾಖೆ ಅಭಿವೃದ್ಧಿಯೂ ಆಗುತ್ತಿದೆ ಎಂದು ಭರವಸೆಯನ್ನೂ ನೀಡುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಸರಣಿ ಅಪಘಾತಗಳಿಂದ ಉಂಟಾದ ಸಾವು-ನೋವುಗಳಿಂದ ಮನಸ್ಸಿಗೆ ನೋವುಂಟಾಗಿದೆ. ಆದ್ದರಿಂದ ಹೊಣೆಹೊತ್ತು ರಾಜೀನಾಮೆ ನೀಡಲು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದೆ. ಆದರೆ ಇನ್ನೂ ಸ್ವಲ್ಪ ದಿನ ಕಾಯುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: