ಪ್ರಮುಖ ಸುದ್ದಿ

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ 

 

ಪ್ರಮುಖ ಸುದ್ದಿ, ನಾಗಮಂಗಲ, ಆ.೨೩: ಹಾಡಹಗಲೇ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕಾಚೇನಹಳ್ಳಿ-ಅಂಚೆಚಿಟ್ಟನಹಳ್ಳಿ ಸಮೀಪದ ಜೇವರ್ಗಿ ಹೆದ್ದಾರಿಯಲ್ಲಿ ನಡೆದಿದೆ.

ಬೆಂಗಳೂರಿನ ರಾಜಾಜಿನಗರದ ನಿವಾಸಿ ಕುಮಾರ್ ಎಂಬುವರ ಪುತ್ರ ಭರತ್ (೨೨) ಕೊಲೆಯಾದ ಯುವಕ. ಭರತ್ ತನ್ನ ಸ್ನೇಹಿತರಾದ ಮುನಿರಾಜು, ಮಂಜುನಾಥ್ ಹಾಗೂ ಹರ್ಷಿತ್ ಅವರೊಡನೆ ಬೆಂಗಳೂರಿನಿಂದ ಎರಡು ಬೈಕ್‌ಗಳಲ್ಲಿ ನಾಗಮಂಗಲಕ್ಕೆ ಬರುತ್ತಿದ್ದಾಗ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಕಾಚೇನಹಳ್ಳಿ-ಅಂಚೆಚಿಟ್ಟನಹಳ್ಳಿ ಸಮೀಪದ ಜೇವರ್ಗಿ ಹೆದ್ದಾರಿಯಲ್ಲಿ ಭರತ್ ಮತ್ತು ಮುನಿರಾಜು ಹೋಗುತ್ತಿದ್ದ ಬೈಕನ್ನು ಅಡ್ಡಗಟ್ಟಿದ್ದಾರೆ. ನಂತರ ಎರಡು ಕಾರುಗಳಿಂದ ಇಳಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭರತ್ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಯಿಂದಾಗಿ ಭರತ್ ಸ್ಥಳದಲ್ಲೇ ಮೃತಪಟ್ಟರೆ, ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ ಮುನಿರಾಜುವಿನ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಾಗಮಂಗಲ ಉಪ ವಿಭಾಗದ ಪ್ರಭಾರ ಡಿವೈಎಸ್‌ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ಧನರಾಜ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಚಿದಂಬರ್ ಪರಿಶೀಲನೆ ನಡೆಸಿದರು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ ಬಿ.ಎಂ)

 

 

 

 

 

Leave a Reply

comments

Related Articles

error: