ಸುದ್ದಿ ಸಂಕ್ಷಿಪ್ತ

ಮೀಸಲಾತಿಯಲ್ಲಿ ಬೇಡ ಜಂಗಮರಿಗೆ ಅನ್ಯಾಯ

ಮೈಸೂರು, ಆ.23 : ಬೇಡ ಜಂಗಮ ಮತ್ತು ಬುಡಗ ಜಂಗಮರ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೀಸಲಾತಿಯನ್ನು ವೀರಶೈವರು ಕಬಳಿಸುತ್ತಿದ್ದಾರೆ ಎಂದು ಮಾದಿಗ ದಂಡೋರ ಸಂಸ್ಥೆ ಆರೋಪಿಸಿದೆ.

ಎಸ್.ಸಿ ಮತ್ತು ಎಸ್ಟಿಯ ಬೇಡ ಮತ್ತು ಬುಡಗ ಜಂಗಮದವರಿಗೆ ಸರ್ಕಾರ ನಿಗದಿಪಡಿಸಿರುವ ಮೀಸಲಾತಿಯು ಕೆಲವರ ದುರಾಸೆಯಿಂದಾಗಿ ನೈಜ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ನಕಲಿ ಬುಡಗ ಜಂಗಮರ ಬಣ್ಣ ಬಯಲು ಮಾಡಬೇಕಿದೆ, ಎಸ್.ಸಿ ಮತ್ತು ಎಸ್ಟಿ ಸಮುದಾಯದ ಬೇಡ ಮತ್ತು ಬುಡಗ ಜಂಗಮದವರಿಗೆ ಅನ್ಯಾಯವಾಗುತ್ತಿದೆ ಎನ್ನುವ ಕೂಗು ಸಹ ಆರ್ತನಾಧವಾಗಿದೆ, ಪರಿಶಿಷ್ಟ ವರ್ಗ ಮತ್ತು ಪಂಗಡಗಳಿಗೆ ಸಿಗಬೇಕಿರುವ ಮೀಸಲಾತಿ ಸವಲತ್ತುಗಳನ್ನು ಬಿಟ್ಟುಕೊಟ್ಟು ನಕಲಿ ಬುಡಗ ಜಂಗಮರು ಉದಾರತೆ ಮೆರಯುಬೇಕಾಗಿದೆ ಎಂದು ಸಂಸ್ಥೆಯ ಡಾ.ಆನಂದಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: