ಸುದ್ದಿ ಸಂಕ್ಷಿಪ್ತ

ಆ. 25ರಂದು ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ ಗಣೇಶ ಚತುರ್ಥಿ ಆಚರಣೆ

ಮೈಸೂರು, ಆ.23 : ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಛಯದ ಮಹಾವಿದ್ಯಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂಗವಾಗಿ ಆ.25ರಂದು ಗಣಪತಿಮೂರ್ತಿಯ ಪ್ರತಿಷ್ಠಾಪನೆ, ಮಹಾಮಂಗಳಾರತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಆ.26ರ ಸಂಜೆ 6ಕ್ಕೆ ಪ್ರಾರ್ಥನಾ ಮಂದಿರದಲ್ಲಿ ವೈಷ್ಣವಿ ದತ್ತರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಆ.27ರಂದು ನಿತ್ಯಶ್ರೀ ಮತ್ತು ತಂಡದವರಿಂದ ಭಕ್ತಿ ಸಂಗೀತ ಹಾಗೂ ಆ.28ರ ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ಮತ್ತು ಗಣಪತಿ ವಿಸರ್ಜನೆ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: