ಪ್ರಮುಖ ಸುದ್ದಿಮೈಸೂರು

ಆ.31ಕ್ಕೆ ಅರಮನೆ ಪ್ರವೇಶಿಸಲಿದೆ ಎರಡನೇ ತಂಡದ ಆನೆಗಳು

ಮೈಸೂರು,ಆ.24-ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ದಿನಗಣನೆ ಪ್ರಾರಂಭವಾಗಿದ್ದು, ಎರಡನೇ ತಂಡದ ಆನೆಗಳ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ.

ಆ.31 ರಂದು ಎರಡನೇ ತಂಡದ ಆನೆಗಳು ಅರಮನೆ ಪ್ರವೇಶ ಮಾಡಲಿವೆ. ಎರಡನೇ ತಂಡದಲ್ಲಿ ಗೋಪಾಲಸ್ವಾಮಿ, ಕೃಷ್ಣ, ವಿಕ್ರಂ, ಗೋಪಿ, ಹರ್ಷ ಮತ್ತು  ಪ್ರಶಾಂತ ಆನೆಗಳು ಆಗಮಿಸಲಿವೆ.

ಆನೆ ಸೆರೆ ಕಾರ್ಯಾಚರಣೆ ಚಾಂಪಿಯನ್ ಕೃಷ್ಣ ಆನೆ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದೆ. ಈ ಆನೆ ಆನೆ ಸೆರೆ ಕಾರ್ಯಾಚರಣೆಯಲ್ಲಿ ರಾಜ್ಯ ಹಾಗೂ ಇತರ ರಾಜ್ಯಗಳಲ್ಲೂ ಭರ್ಜರಿ ಹೆಸರು ಮಾಡಿದೆ.

ಈಗಾಗಲೇ ಮೊದಲ ತಂಡದಲ್ಲಿ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ, ಬಲರಾಮ, ಭೀಮ, ಕಾವೇರಿ, ಗಜೇಂದ್ರ ಆನೆಗಳು ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಗಜಪಡೆಗೆ ತಾಲೀಮು ನೀಡಲಾಗುತ್ತಿದೆ. (ವರದಿ-ಆರ್.ವಿ, ಎಂ.ಎನ್)

Leave a Reply

comments

Related Articles

error: