ಸುದ್ದಿ ಸಂಕ್ಷಿಪ್ತ

8 ಗ್ಲಾಸ್‍ಗಳು ಬಿದ್ದು ಕಾರ್ಮಿಕ ಸ್ಥಳ್ದದಲ್ಲೇ ಸಾವು

ಸರಕು-ಸಾಗಣೆ ವಾಹನಕ್ಕೆ ಗ್ಲಾಸ್‍ಗಳನ್ನು ತುಂಬಿಸುತ್ತಿದ್ದಾಗ, 8 ಗ್ಲಾಸ್‍ಗಳನ್ನು ಆಯತಪ್ಪಿ ಕಾರ್ಮಿಕನ ಮೇಲೆ ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಉತ್ತರಪ್ರದೇಶ ಮೂಲದ ಅಲಿರಾಜು(40)  ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ‘ಶೇಪ್ ಅಂಡ್ ಶೇಡ್ಸ್’ ಗೋದಾಮಿನಲ್ಲಿ ಶನಿವಾರ ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಬಬ್ಲು, ಬಾಸುದೇವು, ಅಲಿರಾಜು ಹಾಗೂ ಜುಹಯಿರ್ ಎಂಬುವವರು ಸರಕು ಸಾಗಣೆ ವಾಹನಕ್ಕೆ 12 ಮಿ.ಮೀ.ನ ಕ್ಲಿಯರ್ ಗ್ಲಾಸ್‍ಗಳನ್ನು ಲೋಡ್ ಮಾಡುತ್ತಿದ್ದಾಗ 8 ಗ್ಲಾಸ್‍ಗಳು ಅಲಿರಾಜು ಮೇಲೆ ಬಿದ್ದಿವೆ. ಗ್ಲಾಸ್ ಚೂರುಗಳು ದೇಹಕ್ಕೆ ಚುಚ್ಚಿ ಅವರು ಸ್ಳಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ಲಾಸ್‍ಗಳನ್ನು ವಾಹನಕ್ಕೆ ತುಂಬಲು ಹಾಗೂ ಕೆಳಗೆ ಇಳಿಸಲು ಸುರಕ್ಷತಾ ಕ್ರಮ ಕೈಗೊಳ್ಳದ ಆರೋಪದ ಮೇರೆಗೆ ಗೋದಾಮು ಮಾಲೀಕ ಅಂಬಾಬಾಲ್, ವ್ಯವಸ್ಥಾಪಕ ಪ್ರವೀಣ್, ಸಿಬ್ಬಂದಿ ಪ್ರಮೋದ್ ಹಾಗೂ ಯತೀಶ್ ಎಂಬವರ ವಿರುದ್ಧ ಮೇಟಗಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

comments

Related Articles

error: