ಕರ್ನಾಟಕ

ಸ್ನೇಹಿತನ ಪತ್ನಿ ಜೊತೆ ಅಕ್ರಮ ಸಂಬಂಧ : ರಾಡ್ ನಿಂದ ಹಲ್ಲೆ ನಡೆಸಿದ ಪತ್ನಿ

ರಾಜ್ಯ(ಹಾಸನ)ಆ.24:- ಪಕ್ಕದ ಮನೆಯ ಸ್ನೇಹಿತನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಚಪಲ ಚೆನ್ನಿಗರಾಯ ಪತಿ ಮೇಲೆ  ಪತ್ನಿ ರಾಡಿನಿಂದ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ   ನಡೆದಿದೆ.
ಹಾರ್ಡ್ವೇರ್  ಅಂಗಡಿ ಇಟ್ಟುಕೊಂಡಿದ್ದ ಸ್ಥಳೀಯ ನಿವಾಸಿ  ಸತೀಶ್ ಎಂಬಾತ  ತನ್ನ ಸ್ನೇಹಿತನ ಪತ್ನಿಯೊಂದಿಗೆ ಲವ್ವಿ ಡವ್ವಿ ಇಟ್ಟುಕೊಂಡಿದ್ದಲ್ಲದೇ  ಆಕೆಯೊಂದಿಗೆ ಪರಾರಿಯಾಗಿದ್ದ. ಸತೀಶ್ ಮತ್ತು ಮಂಜುನಾಥ್ ಎಂಬುವರ ಕುಟುಂಬದವರು ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಮಂಜುನಾಥ್ ಪತ್ನಿ ಮಂಜುಳಾ ಮೇಲೆ  ಸತೀಶ್ ಕಣ್ಣು ಹಾಕಿದ್ದ. ಆಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇಬ್ಬರೂ ಕಳೆದ ಮೇ ತಿಂಗಳಿನಲ್ಲಿ ಪರಾರಿಯಾಗಿ ಮೈಸೂರಿನಲ್ಲಿ ವಾಸವಾಗಿದ್ದರು. ಸತೀಶ್ ಗೆ ಇಬ್ಬರು ಮಕ್ಕಳಿದ್ದು, ಮೈಸೂರಿನಲ್ಲಿ ಸತೀಶ್ ಮತ್ತು ಮಂಜುನಾಥ್ ರ ಪತ್ನಿ ಮನೆ ಮಾಡಿಕೊಂಡು ವಾಸವಾಗಿದ್ದರು. ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇಬ್ಬರಿಗೂ ರಾಜಿ ಮಾಡಿಸಿದ್ದರು. ರೊಚ್ಚಿಗೆದ್ದ ಸತೀಶ್ ಪತ್ನಿ ಅಕ್ರಮ ಸಂಬಂಧ ಪ್ರಶ್ನಿಸಿ ಅಂಗಡಿಯಲ್ಲಿದ್ದಾಗ ಪತಿ ಮೇಲೆ ರಾಡಿನಿಂದ ಹಲ್ಲೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: