ಸುದ್ದಿ ಸಂಕ್ಷಿಪ್ತ

ಸೆ.1 ರಂದು ಗೋಡಂಬಿ ಬೆಳೆಯ ವಿಚಾರ ಸಂಕಿರಣ

ಮೈಸೂರು, ಆಗಸ್ಟ್ 24 : ತೋಟಗಾರಿಕೆ ಮಹಾವಿದ್ಯಾಲಯ ಮೈಸೂರಿನ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕವು, ರಾಷ್ಟ್ರೀಯ ಗೊಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಸಹಯೋಗದೊಂದಿಗೆ ಸೆಪ್ಟೆಂಬರ್ 1 ರಂದು ಗೋಡಂಬಿ ಕೃಷಿಯಲ್ಲಿ ಆಸಕ್ತಿಯಿರುವ ಕೃಷಿಕರಿಗಾಗಿ ಒಂದು ದಿನದ “ಜಿಲ್ಲಾ ಮಟ್ಟದ ಗೋಡಂಬಿ/ಗೇರು ಬೆಳೆಯ ವಿಚಾರ ಸಂಕಿರಣ” ವನ್ನು ಇಲವಾಲ ಸಮೀಪ ಇರುವ ಯಲಚನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿರುವ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಅನುಭವಿ ಗೇರು ಕೃಷಿಕರು, ನುರಿತ ವಿಜ್ಞಾನಿಗಳು, ಸಂಸ್ಕರಣೆ ಮತ್ತು ಮಾರಾಟದಲ್ಲಿ ತೊಡಗಿರುವ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಪೂರ್ವ ನೋಂದಣಿ ಮಾಡಿಸಿ ಭಾಗವಹಿಸಬಹುದಾಗಿದೆ. ಮೊದಲು ಬಂದವರಿಗೆ ಮೊದಲ ಆದತ್ಯೆ. ನೋಂದಣಿಗಾಗಿ ಮಹಾವಿದ್ಯಾಲಯವನ್ನು 9964751033 / 9341997279 ಈ ಮೊಬೈಲ್ ದೂರವಾಣಿಗಳಲ್ಲಿ ಸಂಪರ್ಕಿಸಬಹುದಾಗಿದೆ.

-ಎನ್.ಬಿ.

Leave a Reply

comments

Related Articles

error: