ಪ್ರಮುಖ ಸುದ್ದಿಮೈಸೂರು

ಸಿಂಗಪುರಕ್ಕೆ ತೆರಳಲಿರುವ ನಟನಾ ತಂಡ

ಸಿಂಗಪುರದಲ್ಲಿ ಕನ್ನಡ ಸಂಘವು ನಡೆಸುವ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನವು ಅಕ್ಟೋಬರ್ 29-30 ರಂದು ಸಿಂಗಪುರದ ಪಾಲಿಟೆಕ್ನಿಕ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಲಿದ್ದು, ರಂಗಭೂಮಿ-ಚಲನಚಿತ್ರ ನಟ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ.

ಅಕ್ಟೋಬರ್ 29ರಂದು ಡಾ. ಸುಜಾತಾ ಅಕ್ಕಿ ಅವರ ಜಾನಪದ ಸೊಗಡಿನ ನಾಟಕ ‘ಚಾಮಚೆಲುವೆ’, ಅಕ್ಟೋಬರ್ 30ರಂದು ಜ್ಞಾನಪೀಠ ಪುರಸ್ಕೃತ, ವರಕವಿ ದ.ರಾ. ಬೇಂದ್ರೆ ಅವರ ವಿಡಂಬನೆ ‘ಸಾಯೋ ಆಟ’ ಪ್ರದರ್ಶಗೊಳ್ಳಲಿದೆ.

ಎರಡೂ ನಾಟಕಗಳನ್ನು ಮಂಡ್ಯ ರಮೇಶ್ ನಿರ್ದೇಶಿಸಿದ್ದಾರೆ. ನಾಟಕ ಪ್ರದರ್ಶನ ನೀಡಲು ಮಂಡ್ಯ ರಮೇಶ್ ಅವರ ಜೊತೆ ಕಲಾವಿದರಾದ ಮೇಘ ಸಮೀರ, ರಾಮು ನಟನ, ರಾಗ್ ಅರಸ್, ದಿಶಾ ರಮೇಶ್, ಕಾವ್ಯ ರಾಜೇಂದ್ರ, ಛಾಯಾಶ್ರೀ ಮೈಸೂರು, ದೇವಾನಂದ ವರಪ್ರಸಾದ್, ಸಿರೀಶ್ ಚಂದ್ರಶೇಖರ್ ಸಿಂಗಾಪುರಕ್ಕೆ ತೆರಳಲಿದ್ದಾರೆ.

ಕಳೆದ ಮೂವತ್ತು ವರ್ಷಗಳಲ್ಲಿ ರಂಗಾಯಣದ ನಂತರ ವಿದೇಶದಲ್ಲಿ ನಾಟಕ ಪ್ರದರ್ಶನ ನೀಡುತ್ತಿರುವ ಮೈಸೂರಿನ ಏಕೈಕ ತಂಡ ಎನ್ನುವ ಹೆಗ್ಗಳಿಕೆಗೆ ನಟನ ರಂಗಶಾಲೆ ಪಾತ್ರವಾಗಿದ್ದು, ನಾಟಕಕಾರ್ತಿ ಡಾ. ಸುಜಾತಾ ಅಕ್ಕಿ ಮತ್ತು ಗೋಪಿನಾಥ್ ಅವರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: