ಮೈಸೂರು

ಎಸ್.ಎಂ.ಪಿ ಡೆವಲಪರ್ಸ್ ವತಿಯಿಂದ ಕಾವಾಡಿಗರ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಮೈಸೂರು,ಆ.24:- ಮೈಸೂರಿನ ಟೆಂಟ್ ಶಾಲೆಯಲ್ಲಿ ಕಲಿಯುತ್ತಿರುವ ಕಾವಾಡಿಗಳು ಮತ್ತು ಮಾವುತರ ಮಕ್ಕಳಿಗೆ ಎಸ್.ಎಂ.ಪಿ ಡೆವಲಪರ್ಸ್ ವತಿಯಿಂದ ಉಚಿತವಾಗಿ ಸ್ಕೂಲ್ ಬ್ಯಾಗ್ ಗಳನ್ನು ವಿರಿಸಲಾಯಿತು.

ಗುರುವಾರ ಗೌರಿಹಬ್ಬದ ಪ್ರಯುಕ್ತ ಎಸ್.ಎಂ.ಪಿ ಡೆವಲಪರ್ಸ್ ಮುಖ್ಯಸ್ಥ ಮಹದೇವಸ್ವಾಮಿ ಹಾಗೂ ಕುಟುಂಬಿಕರು ಕಾವಾಡಿಗಳು ಮತ್ತು ಮಾವುತರ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಿದರು. ಬಳಿಕ ಮಾತನಾಡಿದ ಅವರು ಈ ಮಕ್ಕಳಿಗೆ ಉಳಿದ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಂತೆ ತಾವೂ ಬ್ಯಾಗನ್ನು ಹೆಗಲಿಗೆ ಹಾಕಿ ಶಾಲೆಗೆತೆರಳಬೇಕೆನ್ನುವ ಆಸೆ ಇರುತ್ತದೆ. ಅದರಿಂದ ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದೇವೆ ಎಂದರು.

ಮಕ್ಕಳು ತಮಗೆ ನೀಡಿದ  ಬ್ಯಾಗ್ ನ್ನು ಹಿಡಿದು ಸಂಭ್ರಮಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: