ಮೈಸೂರು

ರಸ್ತೆ ಬದಿ ದೋಷಪೂರಿತ ಹೆಲ್ಮೆಟ್ ಮಾರಾಟ ಮಾಡುವವರ ಮೇಲೆ ಪೊಲೀಸರ ದಾಳಿ

ಮೈಸೂರು, ಆಗಸ್ಟ್ 24 : ನಗರದ ರಸ್ತೆ ಬದಿಗಳಲ್ಲಿ ಐಎಸ್‍ಐ ಮಾರ್ಕ್ ಇಲ್ಲದ ದೋಷಪೂರಿತ ಹೆಲ್ಮೆಟ್‍ಗಳನ್ನು ಮಾರಾಟ ಮಾಡುತ್ತಿದ್ದುದ್ದು ಕಂಡುಬಂದ ಮೇರೆಗೆ ಮೈಸೂರು ನಗರದ ಸಂಚಾರಿ ಪೊಲೀಸರು ಉಪಪೊಲೀಸ್ ಆಯುಕ್ತರಾದ ಶ್ರೀ ಅಮಟೆ ವಿಕ್ರಮ ರವರ ನಿರ್ದೇಶನದಲ್ಲಿ ದಿನಾಂಕ : 21-08-2017 ರಂದು ಅಂತಹ ಮಾರಾಟ ಮಾಡುತ್ತಿದ್ದ 304 ಹೆಲ್ಮೆಟ್‍ಗಳನ್ನು ವಶಪಡಿಸಿಕೊಂಡಿರುತ್ತಾರೆ.

ಸಾರ್ವಜನಿಕರು ಕಡಿಮೆ ದರಕ್ಕೆ ಹೆಲ್ಮೆಟ್ ದೊರೆಯುತ್ತದೆ ಎಂಬ ಆಸೆಗೆ ಒಳಗಾಗಿ ರಸ್ತೆ ಬದಿ ಮಾರಾಟ ಮಾಡುವ ದೋಷಪೂರಿತ ಹೆಲ್ಮೆಟ್‍ಗಳನ್ನು ಖರೀದಿಸಬಾರೆಂದು ಇಂತಹ ಹೆಲ್ಮೆಟ್‍ಗಳು ತಲೆಯನ್ನು ರಕ್ಷಿಸುವುದಿಲ್ಲವೆಂದು ಹೆಲ್ಮೆಟ್‍ಗಳನ್ನು ಧರಿಸುವುದು ಸ್ವರಕ್ಷಣೆಗಾಗಿ ಎಂಬುದನ್ನು ಅರಿತು ಐಎಸ್‍ಐ ಮಾರ್ಕಿನ ಹೆಲ್ಮೆಟ್‍ಗಳನ್ನೆ ಖರೀದಿಸುವಂತೆ ಪೊಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

-ಎನ್.ಬಿ.

Leave a Reply

comments

Related Articles

error: