ಸುದ್ದಿ ಸಂಕ್ಷಿಪ್ತ

ಸೆಪ್ಟಂಬರ್ 8 ಪ.ಜಾ.ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆ : ಕುಂದುಕೊರತೆ ಸಲ್ಲಿಕೆಗೆ ಅವಕಾಶ

ಚಾಮರಾಜನಗರ, ಆ. 24: – ಗುಂಡ್ಲುಪೇಟೆ ತಾಲೂಕು ಮಟ್ಟದ ಪರಿಶಿಷ್ಟಜಾತಿ ಮತ್ತು ವರ್ಗಗಳ ಹಿರತಕ್ಷಣಾ ಸಮಿತಿ ಸಭೆಯು ತಹಸಿಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ 8 ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆಯಲಿದೆ.

ತಾಲೂಕಿನ ಪರಿಶಿಷ್ಟಜಾತಿ ಮತ್ತು ಪರಿಶಿಷ್ಠ ವರ್ಗದವರು ಸಮಸ್ಯೆ ಕುಂದುಕೊರತೆಗಳಿದ್ದಲ್ಲಿ ಸಮಿತಿಯ ಸದಸ್ಯರಾದ ಸುಭಾಷ್ ಮಾಡ್ರಹಳ್ಳಿ (ಮೊಬೈಲ್ ಸಂಖ್ಯೆ 9743699073), ಮೂಖಹಳ್ಳಿ ಮಹದೇವಚಾರಿ (ಮೊಬೈಲ್‍ಸಂಖ್ಯೆ 8762342103), ಶ್ರೀಧರ್ ಕಾರೇಮಾಳ ಅವರಿಗೆ (ಮೊಬೈಲ್ ಸಂಖ್ಯೆ 8762342103), ಅಥವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೆಪ್ಟಂಬರ್ 4 ರೊಳಗೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇರ್ಶಕರು ತಿಳಿಸಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: