ಮೈಸೂರು

ಸಂಶೋಧನೆಯ ಕಡೆಗೆ ಹೆಚ್ಚಿನ ಒಲವು ತೋರಿಸಿ: ಡಾ.ಎನ್.ಎಂ. ಶ್ಯಾಮಸುಂದರ್

ವಿದ್ಯಾರ್ಥಿಗಳು ಸಂಶೋಧನೆಗಳ ಕಡೆ ಹೆಚ್ಚು ಆಸಕ್ತಿ ವಹಿಸಬೇಕು. ನೊಬೆಲ್ ಪ್ರಶಸ್ತಿ ಪಡೆಯುವಂತಹ ಸಾಧನೆ ನಿಮ್ಮಿಂದ ಆಗಬೇಕು ಎಂದು ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಅನಾಟಮಿ ಮುಖ್ಯಸ್ಥ ಡಾ.ಎನ್.ಎಂ.ಶ್ಯಾಮಸುಂದರ್ ಹೇಳಿದರು.

ಕಲಾಮಂದಿರದಲ್ಲಿ ಮೈಸೂರು ವಿಜ್ಞಾನ ಸಂಸ್ಥೆಯ ವತಿಯಿಂದ ನಡೆದ 43 ನೇ ತಿಂಗಳ ವಿಜ್ಞಾನ ಉಪನ್ಯಾಸದಲ್ಲಿ ಮಾತನಾಡಿದರು.

ಜಪಾನಿನ ಯೋಸಿನೋರಿ ಒಸುಮಿ ಅವರು ಕಂಡುಹಿಡಿದ ಆಟೊಫೇಜಿಗೆ ಈ ವರ್ಷದ ಮೆಡಿಸಿನ್ ವಿಭಾಗದ ನೋಬೆಲ್ ಪ್ರಶಸ್ತಿ ಲಭಿಸಿದೆ. ಆಟೋಫೇಜಿ ದೇಹದ ಪ್ರತಿ ಜೀವಕೋಶ ತನಗೆ ಬೇಡವಾದ ನಿರುಪಯುಕ್ತ ವಸ್ತುವನ್ನು ಹೊರಹಾಕುತ್ತದೆ, ಮತ್ತು ಅದನ್ನು ಬೇರೆ ಜೀವಕೋಶಗಳು ಬಳಸಿಕೊಳ್ಳುತ್ತವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ಹೇಳಿದರು.

ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು 1930ರಲ್ಲಿ ತಮ್ಮ ರಾಮನ್ ಪರಿಣಾಮವನ್ನು ಪ್ರತಿಪಾದಿಸಿ ನೊಬೆಲ್ ಪಾರಿತೋಷಕ ಪಡೆದಿದ್ದರು. ಆದರೆ ಪ್ರಸ್ತುತ ಭಾರತ ನೊಬೆಲ್ ಪ್ರಶಸ್ತಿ ಪಡೆಯದೆ ಇರುವುದು ಬೇಸರದ ಸಂಗತಿ ಎಂದರು.

ಈ ಸಂದರ್ಭದಲ್ಲಿ ಎಂ.ಎಸ್.ಎ‍ಫ್ ಅಧ್ಯಕ್ಷ ಸಿ.ಕೃಷ್ಣೇಗೌಡ, ಎಂಎಸ್ಎಫ್ ಕಾರ್ಯದರ್ಶಿ ಜಿ.ಬಿ.ಸಂತೋಷ್ ಕುಮಾರ್, ಸದಸ್ಯ ಶ್ರೀಕಂಠಮೂರ್ತಿ ಇದ್ದರು.

Leave a Reply

comments

Related Articles

error: