ಕರ್ನಾಟಕಪ್ರಮುಖ ಸುದ್ದಿ

ಸದ್ಯದಲ್ಲೇ ಬೆಳಗಾವಿಯಲ್ಲಿ ಸರಕಾರಿ ಯೋಜನೆಗಳ ಫಲಾನುಭವಿಗಳ ದೊಡ್ಡ ಸಮಾವೇಶ : ಸಚಿವ ದೇಶಪಾಂಡೆ

ರಾಜ್ಯ(ಬೆಳಗಾವಿ)ಆ.24:-  ಮೂರು ಹೋಬಳಿ ಬಿಟ್ಟು ಇಡೀ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಮಳೆ ಕಡಿಮೆ ಇದೆ. ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ. ಇನ್ ಪುಟ್ ಸಬ್ಸಿಡಿ ಕೊಡಲಾಗುತ್ತಿದೆ. ಬರ ನಿರ್ವಹಣೆಯೂ ನಮಗೆ ಬಹಳ ಸವಾಲು ಆಗಿದೆ ಎಂದ  ಹಿರಿಯ ಸಚಿವ ಆರ್. ವಿ. ದೇಶಪಾಂಡೆ ಬೆಳಗಾವಿ ವಿಭಾಗ ಮಟ್ಟದ ಅಧಿಕಾರಿಗಳು ಹಾಗೂ ಸರಕಾರಿ ಯೋಜನೆಗಳ ಫಲಾನುಭವಿಗಳ ದೊಡ್ಡ ಸಮಾವೇಶ ಮಾಡುವ ಬಗ್ಗೆ ಪ್ರಸ್ತಾಪಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತರ ವ್ಯಾಪ್ತಿಯ 7 ಜಿಲ್ಲೆಗಳ ಡಿಸಿ, ಎಸ್ಪಿ ಸೇರಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ಸದ್ಯದಲ್ಲೇ ನಡೆಸಲಾಗುವುದು. 7 ಜಿಲ್ಲೆಗಳ ಅಧಿಕಾರಿಗಳು ಹಾಗೂ ಸರಕಾರಿ ಯೋಜನೆಯ ಫಲಾನುಭವಿಗಳ ಸಮಾವೇಶ ಸದ್ಯದಲ್ಲೇ ಮಾಡಲಾಗುವುದು. 8162 ಕೋಟಿ ಹಣ ಸಾಲ ಮನ್ನಾ ಮಾಡಿ 22 ಲಕ್ಷ ಜನರ ಸಹಾಯಕ್ಕೆ ಸರಕಾರ ಇತ್ತೀಚೆಗೆ ಬಂದಿದ್ದು ಸ್ಮರಣೀಯ ಎಂದರು. 4 ವರ್ಷದ ಸರಕಾರದ ಸಾಧನೆಗಳನ್ನು ಏಳು ಜಿಲ್ಲೆಗಳ ಅಧಿಕಾರಿಗಳು ವಾರದೊಳಗೆ ವರದಿ ಸಿದ್ಧಪಡಿಸಬೇಕು ಎಂದು ನಿರ್ದೇಶಿಸಿದರು. 3 ನೇ ಸೆಪ್ಟೆಂಬರ್ ಒಳಗೆ ಎಲ್ಲ ಏಳು ಜಿಲ್ಲೆಗಳ ಎಲ್ಲ ಅಧಿಕಾರಿಗಳು ವರದಿ ಸಿದ್ಧಪಡಿಸಿಕೊಳ್ಳಬೇಕು ಎಂದರು. ಸಾಮಾಜಿಕ ನ್ಯಾಯ, ಶೋಷಿತ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಜನಪರ ಕೆಲಸಗಳು, ಸರಕಾರಿ ವಿವಿಧ ಯೋಜನೆಗಳ ಅನುಷ್ಠಾನ ಮಾಡಿರುವ ಬಗ್ಗೆ ಜನತೆಗೆ ಸಂದೇಶ ಕಳಿಸುವ ಉದ್ದೇಶ ಇದೆ. ದಿನಾಂಕ ಮತ್ತು ಸಮಾವೇಶದ ಸ್ಥಳ ಮುಂದಿನ ಸಭೆಯಲ್ಲಿ ಸದ್ಯದಲ್ಲೇ ತಿಳಿಸಲಾಗುವುದು ಎಂದರು. ಅಧಿಕಾರಿಗಳು ಸ್ಪಷ್ಟ, ನಿಖರ ವರದಿ ಸಿದ್ದಪಡಿಸದಿದ್ದರೆ ಶಿಸ್ತು ಕ್ರಮ ಅಧಿಕಾರಿಗಳ ಮೇಲೆ ಕೈಗೊಳ್ಳಲಾಗುವುದು ಎಂದು ದೇಶಪಾಂಡೆ ಎಚ್ಚರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: