ದೇಶ

ನೀಟ್ ಪ್ರವೇಶ ಪರೀಕ್ಷೆಗೆ ತಡೆ : ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ನವದೆಹಲಿ, ಆ.24: ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಉದ್ದೇಶಿಸಿದ್ದ ಎಂಜಿನಿಯರಿಂಗ್ ಪದವಿ ಪ್ರವೇಶಕ್ಕೆ ಮಾನ್ಯ ಪ್ರವೇಶ ಪರೀಕ್ಷೆ ಯೋಜನೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ ಆರ್ ಡಿ) ಸಚಿವಾಲಯ ತಡೆ ನೀಡಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ರಾಷ್ಟ್ರೀಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವುದಾಗಿ, ಮಾರ್ಚ್’ನಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಘೋಷಿಸಿತ್ತು. ಆದರೆ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಯುತ್ತಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್’ಇಇಟಿ-ನೀಟ್)ಯ ಯಶಸ್ಸನ್ನು ಪರಿಶೀಲಿಸಿದ ಬಳಿಕ, ಮುಂದಿನ ಹೆಜ್ಜೆಯ ಬಗ್ಗೆ ಚಿಂತಿಸಲು ನಿರ್ಧರಿಸಿದ್ದರಿಂದ, ಪ್ರಸ್ತುತ ಚಿಂತನೆ ತಡೆ ಹಿಡಿಯಲು ನಿರ್ಧರಿಸಲಾಗಿದೆ. (ವರದಿ: ಎಲ್.ಜಿ)

 

Leave a Reply

comments

Related Articles

error: