ಲೈಫ್ & ಸ್ಟೈಲ್

ಹಸಿರು ತರಕಾರಿಗಳನ್ನು ಸೇವಿಸಿ ಕಿಡ್ನಿ ಕಲ್ಲಿನಿಂದ ದೂರವಿರಿ

ಕಿಡ್ನಿಯಲ್ಲಿ ಕಲ್ಲು ಅಥವಾ ಮೂತ್ರದಲ್ಲಿ ಕಲ್ಲು ಬೀಳುವುದು ಒಂದು ರೋಗವೆಂದು ಪರಿಗಣಿಸಲ್ಪಟ್ಟಿದೆ. ದೇಹದಲ್ಲಿ ನೀರಿನಂಶ ಕಡಿಮೆ ಇದ್ದಾಗ ಮತ್ತು ಕ್ಯಾಲ್ಶಿಯಂ ಕೊರತೆ ಇದ್ದಾಗ ಕಿಡ್ನಿಯಲ್ಲಿ ಕಲ್ಲು ಬೆಳೆಯಲು ಆರಂಭವಾಗುತ್ತದೆ. ಯಾವಾಗ ಇದು ತನ್ನ ಗಾತ್ರವನ್ನು ಹಿಗ್ಗಿಸಲಾರಂಭಿಸುತ್ತದೋ ಆಗ ಕಿಡ್ನಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಪದೇಪದೇ ವಾಂತಿಯಾಗತೊಡಗುತ್ತದೆ. ಅಷ್ಟೇ ಅಲ್ಲ ಹಲವು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತದೆ. ಅದರಿಂದ ಮುಕ್ತಿ ಪಡೆಯಬೇಕಾದರೆ ಈ ಕೆಳಗಿನ ನಿಯಮಗಳನ್ನು ಪಾಲಿಸಿದಲ್ಲಿ ನೀವು ಕಿಡ್ನಿ ಕಲ್ಲಿನಿಂದ ದೂರವಿರಬಹುದು.

  1. ಪ್ರತಿದಿನ 7ರಿಂದ 8 ಗ್ಲಾಸ್ ನೀರನ್ನು ಕುಡಿಯಿರಿ. ಯಾಕೆಂದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಬಾರದು. ಮೂತ್ರದ ಬಣ್ಣ ಹಳದಿಯಾಗುತ್ತಿದ್ದರೆ ನಿಮ್ಮ ದೇಹಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇದೆ ಎಂದೇ ಅರ್ಥ.
  2. ನೀವು ಡಯಟ್ ನಲ್ಲಿದ್ದರೆ ಹಾಲು ಮತ್ತು ಹಾಲಿನಿಂದ ತಯಾರಿಸಿದ ಆಹಾರಗಳನ್ನೇ ಹೆಚ್ಚೆಚ್ಚು ಸೇವಿಸಿ. ಆದರೆ ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚದಂತೆ ನೋಡಿಕೊಳ್ಳಿ. ದೇಹದಲ್ಲಿ ಕ್ಯಾಲ್ಶಿಯಂ ಸಂಖ್ಯೆ ಅಗತ್ಯಕ್ಕಿಂತ ಜಾಸ್ತಿ ಇದ್ದರೂ ಕಿಡ್ನಿಯಲ್ಲಿ ಕಲ್ಲು ಬೆಳೆಯಲಿದೆ.
  3. ಹಪ್ಪಳ, ಸಂಡಿಗೆಗಳನ್ನು ಸೇವಿಸುವಾಗ ಮಿತಿ ಇರಲಿ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಶೇಖರವಾಗಿರುತ್ತದೆ. ಹೆಚ್ಚೆಚ್ಚು ಉಪ್ಪು ಸೇವಿಸುವುದನ್ನು ನಿಲ್ಲಿಸಿ.
  4. ಡಯಟ್ ನಲ್ಲಿ ಹಸಿರು ತರಕಾರಿಗಳನ್ನು ಹೆಚ್ಚಾಗಿ ಬಳಸಿ. ಅದರ ಜೊತೆ ಆಹಾರದಲ್ಲಿ ಬೀನ್ಸ್, ಬಾದಾಮಿ, ಸನ್ ಫ್ಲವರ್ ಬೀಜ, ಎಳ್ಳನ್ನು ಬಳಸಿ. ಇದರಿಂದ ನಿಮಗೆ ಹೇರಳವಾಗಿ ಮ್ಯಾಗ್ನಿಶಿಯಂ ಸಿಗಲಿದೆ. ಇದು ದೇಹದಲ್ಲಿ ಕ್ಯಾಲ್ಶಿಯಂನ್ನು ನಿಯಂತ್ರಿಸುತ್ತದೆ.
  5. ಸಿಹಿ ತಿಂಡಿಗಳ ಸೇವನೆ ಮಿತಿಯಲ್ಲಿರಲಿ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮ್ಯಾಗ್ನಿಶಿಯಂ ಮತ್ತು ಕ್ಯಾಲ್ಸಿಯಂಗಳು ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಲಭ್ಯವಾಗುವುದಿಲ್ಲ.
  6. ಪ್ರತಿದಿನ ಹತ್ತು ನಿಮಿಷ ನಡೆಯಿರಿ ಇಲ್ಲವೇ ಯಾವುದಾದರೂ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. ಇದರಿಂದ ದೇಹದ ತೂಕ ಮತ್ತು ಬ್ಲಡ್ ಪ್ರೆಶರ್ ನಿಯಂತ್ರಣದಲ್ಲಿರುತ್ತದೆ.
  7. ಆದಷ್ಟು ತೂಕ ಹೆಚ್ಚದಂತೆ ಅದರಲ್ಲೂ ದಪ್ಪನೆಯ ಹೊಟ್ಟೆ ಬೆಳೆಯದಂತೆ ನೋಡಿಕೊಳ್ಳಿ ಇದರಿಂದಲೂ ಕಲ್ಲು ಬೆಳೆಯುವ ಸಾಧ್ಯತೆ ಇರುತ್ತದೆ.

Leave a Reply

comments

Related Articles

error: