ಮೈಸೂರು

ವಿಕೇಂದ್ರಿಕರಣ ಕೇವಲ ಬಡವರ ಹಾಗೂ ನಿರ್ಗತಿಕರ ಕಣ್ಣೊರೆಸುವ ತಂತ್ರ : ರಾಜ್‍ಕಿರಣ್ ವಿಷಾದ

ಮೈಸೂರು,ಆ.24:-ಪ್ರಸ್ತುತ ಕಾಲಮಾನದ ವಿಕೇಂದ್ರಿಕರಣ ಕೇವಲ ಬಡವರ ಹಾಗೂ ನಿರ್ಗತಿಕರ ಕಣ್ಣೊರೆಸುವ ತಂತ್ರವಾಗಿದೆ ಎಂದು ರಾಜ್ಯ ಗ್ರಾಮ ಪಂಚಾಯತ್ ಗಳ ಒಕ್ಕೂಟದ ಅಧ್ಯಕ್ಷ ರಾಜ್‍ಕಿರಣ್ ವಿಷಾದ ವ್ಯಕ್ತಪಡಿಸಿದ್ದಾರೆ.

ಹುಣಸೂರು ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತದ ಜೀವಾಳವೆ ಗ್ರಾಮಿಣ ಪ್ರದೇಶಗಳು ಆದರೆ ಇತ್ತೀಚಿನ ದಿನದಲ್ಲಿ ಅಧಿಕಾರ ವಿಕೇಂದ್ರಿಕರಣದ ಹೆಸರಿನಲ್ಲಿ ಗ್ರಾಮೀಣ ಪ್ರದೇಶಗಳು ಹಾಗೂ ಗ್ರಾಮೀಣ ಜನರು ಅಪಾಯದ ಅಂಚಿಗೆ ಸಿಲುಕಿ ನರಳುತ್ತಿದ್ದಾರೆ ಎಂದರು. ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಹಳ್ಳಿಗಳಿಂದ ತಮ್ಮ ತಮ್ಮ ಜಮೀನಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು, ರೈತರು ಮನೆ ಕಟ್ಟಲು ಸರ್ಕಾರ ನೀಡುತ್ತಿರುವ ಸಹಾಯಧನವನ್ನು 1.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕು, ಪ್ರತಿಯೊಂದು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲೂ ರಾಷ್ಟ್ರಿಕೃತ ಬ್ಯಾಂಕಿನ ಉಪ ಶಾಖೆಗಳನ್ನು ತೆರೆಯಬೇಕು, ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸೂಕ್ತ ತ್ಯಾಜ್ಯ ವಿಲೇವಾರಿಯ ವ್ಯವಸ್ಧೆ ಮಾಡಬೇಕು, ಜನ ಜಾನುವಾರುಗಳ ಕುಡಿಯುವ ನೀರು ಒದಗಿಸಲು ಅಂತರ್ಜಲ ವೃದ್ಧಿಸುವ ಸಲುವಾಗಿ ಕೆರೆಗಳನ್ನು ತುಂಬಿಸಲು ಏತ ನೀರಾವರಿ ವ್ಯವಸ್ಥೆ ಮಾಡಬೇಕು,ರೈತ ದೃಢೀಕರಣ ಪತ್ರ, ಕಾರ್ಮಿಕ ದೃಢೀಕರಣ ಪತ್ರ, ಜನನ ಮರಣ ದೃಢೀಕರಣ ಪತ್ರ,ಆರ್.ಟಿ.ಸಿ ಮತ್ತು ಪಡಿತರ ಚೀಟಿಗಳನ್ನು ಗ್ರಾಮಪಂಚಾಯತ್ ಕೇಂದ್ರಗಳಲ್ಲೆ ನೀಡುವಂತಾಗಬೇಕು, ರೋಜ್‍ಗಾರ್ ಯೋಜನೆಗೆ ಜನರ ಹಿತದೃಷ್ಠಿಯಿಂದ 3 ನೇ ಒಂದು ಬಾಗದಷ್ಟು ಹಣ ಪ್ರಾಂಭದಲ್ಲೇ ಬಿಡುಗಡೆ ಮಾಡಬೇಕು, ಗ್ರಾಮೀಣ ಶಾಲೆಗಳ ಮೂಲಭೂತ ಸೌಕರ್ಯಕ್ಕಾಗಿ ಶೇ.80 ರಷ್ಟು ಹಣವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕೃಷ್ಣಕುಮಾರ್ ಮಾತನಾಡಿ ರಾಜ್ಯದಲ್ಲಿ 13 ವರ್ಷಗಳಿಂದ ನಿರಂತರವಾಗಿ ಬರ ಕಾಣಿಸಿಕೊಂಡಿದು ಇಂತಹ ಪರಿಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಮಡುವುದು ಸೂಕ್ತ ಎಂದ ಅವರು ದೇಶದ ತಂಬಾಕು ಬೆಳೆಗಾರರ ಉಳಿವಿಗಾಗಿ ಲೈಸೇನ್ಸ್‍ದಾರರಿಗೆ ರೈತರಿಂದ ವಸೂಲು ಮಾಡಿದ ದಂಡದ ಹಣದಿಂದ ಪರಿಹಾರ ಒದಗಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಗ್ರಾಮ ಪಂಚಾಯ್ತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಸತೀಶ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ತೋಂಡಾಳು ದಾಸಶೆಟ್ಟಿ ಉಪಸ್ಥಿತರಿದ್ದರು.

Leave a Reply

comments

Related Articles

error: