ಮೈಸೂರು

ಜಿಎಸ್‍ಟಿ, ಎನ್‍ಎಸ್‍ಐಸಿ ಬಗ್ಗೆ ಅರಿವು ಕಾರ್ಯಕ್ರಮ

‘ಜಿಎಸ್‍ಟಿ ಮತ್ತು ಎನ್‍ಎಸ್‍ಐಸಿ ಹಣಕಾಸು ಸೌಲಭ್ಯ ಕೇಂದ್ರ’ ಎಂಬ ವಿಷಯದ ಮೇಲೆ ಅ. 28 ರಂದು ಬೆಳಗ್ಗೆ 10.30ಕ್ಕೆ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಕಿಂಗ್ಸ್ ಕೋರ್ಟ್ ಆಸ್ಪತ್ರೆಯಲ್ಲಿ ಅರಿವು ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಅಸೋಸಿಯೇಷನ್ (ಕೆಎಎಸ್‍ಎಸ್‍ಐಎ), ರಾಜ್ಯ ಮಟ್ಟದ ಸಣ್ಣ ಕೈಗಾರಿಕೋದ್ಯಮದ ಪ್ರಾತಿನಿಧಿಕ ಸಂಸ್ಥೆ, ರಾಷ್ಟ್ರೀಯ ಸಣ್ಣ ಮಟ್ಟದ ಕೈಗಾರಿಕೆ ನಿಗಮ (ಎನ್‍ಎಸ್‍ಐಸಿ), ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಮೈಸೂರಿನ ಎಲ್ಲ ಕೈಗಾರಿಕಾ ಸಂಘಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಎಸ್‍ಟಿ ಅಳವಡಿಸಿಕೊಳ್ಳುವ ಬಗ್ಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಇರುವ ಸಂಶಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರೀಯ ಅಬಕಾರಿ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಅವರೊಂದಿಗೆ ಸಂವಹನ ನಡೆಸಲಿದ್ದಾರೆ. ಕೆಎಎಸ್‍ಎಸ್‍ಐಎ ಅಧ್ಯಕ್ಷ ಎ. ಪದ್ಮನಾಭ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಾಸಕ ವಾಸು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಿ. ರಂದೀಪ್ ಭಾಗವಹಿಸಲಿದ್ದಾರೆ.

ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮತ್ತು ಸೇವೆ ತೆರಿಗೆ ಇಲಾಖೆಯ ಮೈಸೂರು ಅಧೀಕ್ಷಕ ವೆಂಕಟೇಶ್ ಮತ್ತು ಜಿಎಸ್‍ಟಿ ತೆರಿಗೆ ಸಲಹೆಗಾರ ಅಡ್ವೋಕೇಟ್ ಬಿ. ಅನಿಲ್ ಕುಮಾರ್ ಅವರು ವಿಷಯ ಮಂಡಿಸಲಿದ್ದಾರೆ. ಆಸಕ್ತ ಕೈಗಾರಿಕೋದ್ಯಮಿಗಳು 100 ರು. ಶುಲ್ಕ ಭರಿಸಿ ಅ. 25 ರ ಒಳಗೆ ಮೇಟಗಳ್ಳಿ ಕೆಆರ್‍ಎಸ್‍ ರಸ್ತೆಯಲ್ಲಿರುವ ಮೈಸೂರು ಕೈಗಾರಿಕೆ ಅಸೋಸಿಯೇಷನ್‍ ಅಥವಾ ಮೈಕ್ರೋ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೌನ್ಸಿಲ್, ನಂ. 1090, ವಿಷ್ಣುವರ್ಧನ್ ರಸ್ತೆ – ಇಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮ ಸಂಯೋಜಕ ಶಯನ – 9845297550/0821-4258819 ಅಥವಾ [email protected] ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: