ಲೈಫ್ & ಸ್ಟೈಲ್

ಆರೋಗ್ಯಯುತ ಜೀವನಕ್ಕೆ ಗ್ರೀನ್ ಟೀ ಸೇವಿಸಿ

ಆರೋಗ್ಯಯುತ ಜೀವನಕ್ಕೆ ಗ್ರೀನ್ ಟೀ ಅತಿ ಅಗತ್ಯ. ಪ್ರತಿ ದಿನ ಗ್ರೀನ್ ಟೀ ಸೇವೆನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವುದು. ದೇಹದ ತೂಕ ಕಮ್ಮಿಯಾಗಿ ಲವಲವಿಕೆ ನೀಡುವುದು. ಔಷಧಿ ಗುಣಯುಕ್ತ ಗ್ರೀನ್ ಟೀ ಸೇವನೆಯಿಂದ ದೇಹದಲ್ಲಿ ಶೇಖರಣೆಯಾದ ಅನಗತ್ಯ ಟಾಕ್ಸಿನ್ಸ್ ಹಾಗೂ ಕೊಬ್ಬು ದೂರವಾಗಿ ತ್ವಚೆಯ ಆರೋಗ್ಯವೂ ಉತ್ತಮಗೊಳ್ಳುವುದು.

ಕ್ರಿ.ಪೂ.600 ರಲ್ಲೇ ಗ್ರೀನ್ ಟೀ ಬಳಕೆ ಬಗ್ಗೆ ದಾಖಲೆಗಳಿವೆ. ಕ್ಯಾಮೆರಲಿಯಾ ಸೈನೆನ್ಸಿಸ್ ಎಂಬ ಜಾತಿಯ ಟೀ ಗಿಡವೇ ಗ್ರೀನ್ ಟೀ ಮೂಲ, ಪೂರ್ವಜರು ಔಷಧಿಯಂತೆ ಬಳಸುತ್ತಿದ್ದರು. ಅತಿ ಹೆಚ್ಚು ಆಂಟಿಯಾಕ್ಸಿಡೆಂಟ್, ಅಮಿನೊ ಆಸಿಡ್, ಕಾರ್ಬೋಹೈಡ್ರೇಟ್, ಲಿಪಿಡ್ ಅಂಶಗಳನ್ನು ಹೊಂದಿರುವ ಗ್ರೀನ್ ಟೀ ರಕ್ತ ಹೆಪ್ಪುಗಟ್ಟುವಿಕೆ, ಗಾಯಗಳು ಶೀಘ್ರವಾಗಿ ಗುಣವಾಗಲು, ಜೀರ್ಣಕ್ರಿಯೆ ವೃದ್ಧಿಗೆ, ಹೃದಯ ಸ್ವಾಸ್ಥ್ಯ ಹಾಗೂ ಮಾನಸಿಕ ಆರೊಗ್ಯವೂ ಉತ್ತಮಗೊಳ್ಳುವುದು.

ಗ್ರೀನ್ ಟೀ ಉಪಯೋಗ :

09-bellyfaಗ್ರೀನ್ ಟೀ “ತೂಕ ಇಳಿಕೆಗೆ” :  ದಿನಕ್ಕೆ ಮೂರು ಬಾರಿಯಂತೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಸಾದಾರಣ ಹಾಲಿನ ಟೀ ಬದಲಾಗಿ ಗ್ರೀನ್ ಟೀ ಸೇವಿಸುವುದರಿಂದ ಬೊಜ್ಜು ಕರಗುವುದು. ದಿನಂ ಪ್ರತಿ ಆಹಾರಕ್ರಮದಲ್ಲಿ ಸ್ವಲ್ಪ ಬದಲಾವಣೆ ತಂದು ಗೋದಿ ಚಪಾತಿ, ಸಲಾಡ್ ಅನ್ನು ಆಹಾರದಲ್ಲಿ ಅಳವಡಿಸಿಕೊಂಡರೆ ಶೀಘ್ರದಲ್ಲಿಯೇ ಬೊಜ್ಜು ಕರಗಿ ಉತ್ತಮ ಫಲಿತಾಂಶ ದೊರೆಯುವುದು. ಆಂಟಿಯಾಕ್ಸಿಡೆಂಡ್ ಸಮೃದ್ಧವಾಗಿರುವ ಗ್ರೀನ್ ಟೀ ಸೇವನೆಯಿಂದ ಹಸಿವು ನಿಯಂತ್ರಿಸಿ ತಿನ್ನುವುದನ್ನು ಕಡಿಮೆಗೊಳಿಸುವುದು.

ಗ್ರೀನ್ ಟೀ ಆರೋಗ್ಯ ಗುಣಗಳು :

ಮಧುಮೇಹ ನಿಯಂತ್ರಕ : ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸಲು ಗ್ರೀನ್ ಟೀ ಸಹಕಾರಿಯಾಗಿದ್ದು ಮಧುಮೇಹವನ್ನು ನಿಯಂತ್ರಿಸುವುದು, ಇಲ್ಲದವರಿಗೆ ಬರುವುದನ್ನು ವಿಳಂಬವಾಗಿಸುವುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು : ಗ್ರೀನ್ ಟೀ ಆಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿದ್ದು ದೇಹದಲ್ಲಿರುವ ಅನುಪಯುಕ್ತ ತ್ಯಾಜ್ಯವನ್ನು ಹೊರದೂಡಿ ಟಾಕ್ಸಿನ್ಸ್ ಮುಕ್ತಗೊಳಿಸಿ ರೋಗ ನಿರೋಧ ಶಕ್ತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು.

ಕ್ಯಾನ್ಸರ್ ತಡೆಯುವುದು : ಪ್ರತಿ ದಿನ ಒಂದು ಕಪ್  ಗ್ರೀನ್ ಟೀ ಕುಡಿಯುವುದರಿಂದ  ಕ್ಯಾನ್ಸರ್ ಗಡ್ಡೆಗಳನ್ನು ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದು  ಕ್ಯಾನ್ಸರ್ ಕಣಗಳನ್ನು ನಿರ್ನಾಮಗೊಳಿಸುವುದು.

ಹೃದಯಘಾತ ಮತ್ತು ಪಾಶ್ವವಾಯು ಕಾಯಿಲೆ ನಿಯಂತ್ರಕ : ದೇಹದಲ್ಲಿನ ರಕ್ತ ಸಂಚಲನವು ಸಮರ್ಪಕವಾಗಿ ಸಂಚಲನವಾಗದಿದ್ದರೆ ಪಾರ್ಶ್ವವಾಯು ಮತ್ತು ಹೃದಯಾಘಾತವುಂಟಾಗುವುದು. ಇದನ್ನು ತಡೆಯಲು  ಗ್ರೀನ್ ಟೀ ರಾಮಬಾಣವಾಗಿದ್ದು ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಸಿ ರಕ್ತನಾಳಗಳನ್ನು ಹೆಪ್ಪುಗಟ್ಟುವಿಕೆಯನ್ನು ತಡೆಯುವುದು ಇದರಿಂದ ಹೃದಯಾಘಾತ ಸಂಭವನ್ನು ಕುಂಠಿತಗೊಳಿಸುವುದು.

ತ್ವಚೆ ಸಮಸ್ಯೆಗೆ : ದೇಹದಲ್ಲಿರುವ ಕೆಟ್ಟ ಅಂಶವನ್ನು ಹೊರದೂಡಿ ರಕ್ತವನ್ನು ಶುದ್ಧಿಗೊಳಿಸುವುದರಿಂದ  ದೇಹವೂ ಶುದ್ಧಿಯಾಗಿ ತ್ವಚೆಯು ಸುಂದರಗೊಳ್ಳುವುದು. ಮೊಡವೆ ಹಾಗೂ ಸುಕ್ಕುಗಳನ್ನು ತಡೆಹಿಡಿಯುವುದು.

ಎಷ್ಟು ಬಾರಿ ಸೇವನೆ ? : ಗ್ರೀನ್ ಟೀಯನ್ನು ಮಿತವಾಗಿ ಸೇವಿಸಬೇಕು, ಒಂದು ದಿನಕ್ಕೆ ಐದು ಕಪ್ ಮೀರಬಾರದು ಎನ್ನುವುದು ವೈದ್ಯರ ಅಭಿಮತ.

 

Leave a Reply

comments

Related Articles

error: