ಕರ್ನಾಟಕಪ್ರಮುಖ ಸುದ್ದಿ

ಬ್ಲ್ಯೂ ವೇಲ್’ ಗೇಮ್ : ಹುಬ್ಬಳ್ಳಿಯಲ್ಲಿ ಬೆರಳು ಕತ್ತರಿಸಿಕೊಂಡ ವಿದ್ಯಾರ್ಥಿನಿ

ರಾಜ್ಯ(ಹುಬ್ಬಳ್ಳಿ) ಆ.26:- ಬ್ಲ್ಯೂ ವೇಲ್’ ಗೇಮ್ ರಾಜ್ಯದಲ್ಲಿನ ಮಕ್ಕಳ ಮೇಲೂ ಪರಿಣಾಮ ಬೀಳುತ್ತಿದ್ದು, ಪೋಷಕರನ್ನು ಬೆಚ್ಚಿ ಬೀಳಿಸಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯೋರ್ವಳು ಬ್ಲ್ಯೂ ವೇಲ್  ಗೇಮ್ ಆಡುತ್ತಾ ತನ್ನ ಕೈ ಬೆರಳು ಕೊಂಡಿದ್ದಾಳೆ ಎನ್ನಲಾಗುತ್ತಿದೆ.

ರಾಜನಗರದ ಕೇಂದ್ರಿಯ ವಿದ್ಯಾಲಯದ (ಕೆ.ವಿ-1) ಆರನೇ ತರಗತಿ ಓದುತ್ತಿರುವ ಜೀಜಾಬಾಯಿ ಬೆರಳು ಕೊಯ್ದುಕೊಂಡ ವಿದ್ಯಾರ್ಥಿನಿಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ವಿಷಯವನ್ನು ಆಕೆ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾಳೆ. ಸ್ನೇಹಿತರು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ಕೂಡಲೇ ವಿದ್ಯಾರ್ಥಿನಿಯನ್ನು ಕಚೇರಿಗೆ ಕರೆಯಿಸಿ ಶಿಕ್ಷಕರು  ವಿಚಾರಿಸಿದ್ದಾರೆ. ಮನೆಯಲ್ಲಿ ಗೇಮ್ ಆಡುವಾಗ ಬೆರಳು ಕೊಯ್ದು ಕೊಂಡಿದ್ದನ್ನು ಆಕೆ ಒಪ್ಪಿಕೊಂಡಿದ್ದಳು. ಬಾಲಕಿ ತನ್ನ ತಂದೆಯ ಮೊಬೈಲ್ನಲ್ಲಿ ಗೇಮ್ ಡೌನ್ಲೋಡ್ ಮಾಡಿಕೊಂಡಿದ್ದಳು. ಆಕೆಯ ಎದುರಿಗೆ ವಿಷಯ ದೊಡ್ಡದು ಮಾಡದೆ, ಗೇಮ್ ಅನ್ನು ಅನ್‌ಇನ್ಸ್ಟಾಲ್ ಮಾಡುವಂತೆ ಸೂಚಿಸಿದ ಶಿಕ್ಷಕರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: