ಮೈಸೂರು

ಮೈಸೂರು ಚಲೋ ಚಳುವಳಿ ದಿನಾಚರಣೆ

ಮೈಸೂರು ಚಲೋ ಚಳುವಳಿಯ ನೆನಪಿಗಾಗಿ ಮೈಸೂರಿನ ಸುಬ್ಬರಾಯನ ಕೆರೆಯ ಬಳಿ ಸೋಮವಾರ ಮೈಸೂರು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸಹಯೋಗದೊಂದಿಗೆ ಮೈಸೂರು ಚಲೋ ಚಳುವಳಿ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 1947 ರ ಅಕ್ಟೋಬರ್ 24 ರಂದು ಸ್ವಾತಂತ್ರ್ಯ ಹೋರಾಟಗಾರರು ಮೈಸೂರು ಚಲೋ ಚಳುವಳಿಯನ್ನು ಹಮ್ಮಿಕೊಂಡಿದ್ದರು.

ಸುಬ್ಬರಾಯನ ಕೆರೆ ಬಳಿ ಇರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು 1947 ರ ಮೈಸೂರು ಚಲೋ ಚಳುವಳಿಯನ್ನು ನೆನಪಿಸಿಕೊಂಡರು.

ಸಂಘದ ಅಧ್ಯಕ್ಷ ಡಾ. ಎಂ.ಜಿ. ಕೃಷ್ಣಮೂರ್ತಿ ಅವರು ಮಾತನಾಡಿ ಮೈಸೂರು ಚಲೋ ಚಳುವಳಿಯು ಸ್ವಾತಂತ್ರ್ಯ ಹೋರಾಟದ ಒಂದು ಭಾಗವೇ ಆಗಿದೆ. 1947 ರಲ್ಲಿ ಚಳುವಳಿ ನಡೆದಿದ್ದು, ಪ್ರತಿವರ್ಷವೂ ಅದರ ನೆನಪಿಗಾಗಿ ನಾವು ಈ ದಿನಾಚರಣೆ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ. ಅಧಿಕ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಇದರಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಕೆಲವರು ಇಂದು ನಮ್ಮೊಂದಿಗಿಲ್ಲ. ಆದರೂ ಅವರ ನೆನಪಿಗೋಸ್ಕರ ನಾವಿದನ್ನು ನಡೆಸಿಕೊಂಡು ಬಂದಿದ್ದೇವೆ. ಮುಂದೆಯೂ ನಡೆಸುತ್ತೇವೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರಾದ ಲಿಂಗಪ್ಪ, ಸಿದ್ದಯ್ಯ, ಮಾದಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: