ಮೈಸೂರು

ಕರ್ನಾಟಕ ಪ್ರಿಮಿಯರ್ ಲೀಗ್ : ತಂಡದ ಆಟಗಾರರ ಹೆಸರು ಪ್ರಕಟ

ಮೈಸೂರು, ಆ.26:- ಮೈಸೂರು ವಾರಿಯರ್ಸ್, ಕಾರ್ಬನ್ ಸ್ಮಾರ್ಟ್ ಫೋನ್ಸ್ ಕರ್ನಾಟಕ ಪ್ರಿಮಿಯರ್ ಲೀಗ್ ನ ಮುಂಬರುವ ಆವೃತ್ತಿಯಲ್ಲಿ ತಂಡವನ್ನು ಪ್ರತಿನಿಧಿಸುವ ಆಟಗಾರರ ಹೆಸರನ್ನು ಪ್ರಕಟಿಸಿದೆ ಎಂದು ಮ್ಯಾನೇಜರ್ ಸುರೇಶ್ ತಿಳಿಸಿದರು.

ನಗರದ ಖಾಸಗೀ ಹೋಟೆಲೊಂದರಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಪಿಎಲ್ ನ ಹರಾಜು ಪ್ರಕ್ರಿಯೆಯ ಮೂಲಕ 18 ಜನ ಆಟಗಾರರು ಆಯ್ಕೆಯಾಗಿದ್ದಾರೆ. ಮೈಸೂರು ವಾರಿಯರ್ಸ್ ತಂಡದಿಂದ ನಡೆಸಲಾದ ಪ್ರತಿಭಾನ್ವೇಷಣೆಯಲ್ಲಿ ಇಬ್ಬರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮೈಸೂರು ವಾರಿಯರ್ಸ್ ತಂಡ ಕೆಪಿಎಲ್ ಅನ್ನು 2014 ರಲ್ಲಿ ಪ್ರವೇಶಿಸಿ ಅದೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಬೆಳೆಯಿತು. 2014 ರಲ್ಲಿ ಮೈಸೂರು ವಾರಿಯರ್ಸ್ ನ ಇಬ್ಬರು ತಾರಾ ಕ್ರಿಕೆಟಿಗರು ಐಪಿಎಲ್ ಪ್ರವೇಶಿಸಿದರು. ಮೈಸೂರು ವಾರಿಯರ್ಸ್ ನಿಂದ ಆಯ್ಕೆಯಾದ ಬಹಳಷ್ಟು ಆಟಗಾರರು ಭಾರತದ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕರುಣದ ನಾಯರ್, ಜೆ.ಸುಚಿತ್ ರವರು ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಮೈಸೂರು ವಾರಿಯರ್ಸ್ ತಂಡವು ಮುಂದಿನ ಪಂದ್ಯಗಳಲ್ಲಿ ಯಶಸ್ವಿ ಪ್ರದರ್ಶನ ನೀಡಲು ಸಜ್ಜಾಗಿದೆ. ಈ ಆವೃತ್ತಿಯಲ್ಲಿಯೂ ಪಂದ್ಯಾವಳಿಯಲ್ಲಿ ಯಶಸ್ವಿಯಾಗುವ ವಿಶ್ವಾಸ ಹೊಂದಿದೆ ಎಂದು ಕ್ರಿಕೆಟ್ ಗೆ ಆಯ್ಕೆಯಾದವರನ್ನು ಪರಿಚಯಿಸಿ ನಂತರ ಅವರಿಗೆ ಶುಭಕೋರಿದರು.

ಸುದ್ದಿಗೋಷ್ಠಿಯಲ್ಲಿ ಎನ್ ಆರ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಮೈಸೂರು ವಾರಿಯರ್ಸ್ ತಂಡದ ಮಾಲಿಕರಾದ  ಗುರು, ಅರ್ಜುನ್ ರಂಗ, ಪವನ್ ರಂಗ, ,ಕಿರಣ್ ರಂಗ, ಕೃಷ್ಣ ರಂಗ ಮತ್ತಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: