ಮೈಸೂರು

ಆ.29ರಂದು ಶರಣ ಸಾಹಿತ್ಯ ಪರಿಷತ್ತಿನಿಂದ ‘ವಚನದಿನ’ ಆಚರಣೆ

ಮೈಸೂರು,ಆ.26 : ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕ ಸುತ್ತೂರು ಶ್ರೀ ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜನ್ಮ ದಿನದಂಗವಾಗಿ ಪರಿಷತ್ತು ವತಿಯಿಂದ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಚನದಿನವನ್ನು ಆಯೋಜಿಸಲಾಗಿದೆ.

12ನೇ ಶತಮಾನದ ಶರಣರ ಸಂದೇಶ, ಸಮಾನತೆ ಮತ್ತು ವಿಶ್ವಮೌಲ್ಯಗಳನ್ನು ಬಿತ್ತಿರುವ ನಿಟ್ಟಿನಲ್ಲಿ ಆಯೋಜಿಸಿರುವ ವಚನ ದಿನವನ್ನು ನಗರದ ಜೆ.ಎಸ್.ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಆ.29ರ ಸಂಜೆ 6ಕ್ಕೆ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಅವರು ಉದ್ಘಾಟಿಸುವರು ಎಂದು ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ಘಟಕದ ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ ತಿಳಿಸಿದರು.

‘ವಚನ ಸಾಹಿತ್ಯದ ವರ್ತಮಾನ ಪ್ರಸ್ತುತತೆ ಬಗ್ಗೆ ಜೆ.ಎಸ್.ಎಸ್ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ನಂದೀಶ್ ಹಂಚ್ಯರವರು, ವಚನ ಸಾಹಿತ್ಯದಲ್ಲಿರುವ ಸಮಾನತೆ ಅಂಶಗಳು ವಿಷಯವಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ಉಪನ್ಯಾಸ ನೀಡುವರು. ಪರಿಷತ್ತು ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಲಿರುವೆ ಎಂದು ವಿವರಿಸಿದರು.

ವೀರಭದ್ರಯ್ಯ ಹಿರೇಮಠ್ ಮತ್ತು ಸುನಿತಾ ಹಿರೇಮಠ್ ರಿಂದ ವಚನ ಸಂಗೀತವನ್ನು, ಶಿವರಾತ್ರೀಶ್ವರ ಅಕ್ಕನ ಬಳಗದ ಅಧ್ಯಕ್ಷೆ ಎಂ.ವಿ.ನೀಲಾಂಬಿಕಾ ದತ್ತಿ ದಾನಿಗಳಾಗಿದ್ದಾರೆ ಎಂದು ತಿಳಿಸಿದರು.

ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶೈಕ್ಷಣಿಕ ವರ್ಗಗಳವರೆಗೆ ಶರಣರ ವಚನಗಳನ್ನು ಕಡ್ಡಾಯಗೊಳಿಸಿ, ಕಲ್ಬುರ್ಗಿ ಕೇಂದ್ರ ವಿವಿಗೆ ಬಸವೇಶ್ವರ ಕೇಂದ್ರ ವಿಶ್ವವಿದ್ಯಾಲಯವೆಂದು ನಾಮಕರಣ ಮಾಡಿ, ಬಸವ ಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅನುಭವ ಮಂಟಪದಕ್ಕೆ ಹೊಂದಿಕೊಂಡಂತೆ ವಚನ ವಿವಿ ಸ್ಥಾಪಿಸಿ, ಬೆಂಗಳೂರು ಮೆಟ್ರೋ ರೈಲಿಗೆ ಬಸವೇಶ್ವರ ಮೆಟ್ರೋ ರೈಲೆಂದು ಹೆಸರಿಡುವುದು ಸೇರಿದಂತೆ ಪ್ರತಿ ವರ್ಷ ಆ.29ರಂದು ವಚನ ದಿನವನ್ನಾಗಿ ಸರ್ಕಾರ ಘೋಷಿಸಬೇಕೆಂದು  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಚಿಕ್ಕಮಗಳೂರಿನಲ್ಲಿ ಈಚೆಗೆ ನಡೆದ 23ನೇ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಕಾರ್ಯದರ್ಶಿ ಮಹದೇವಪ್ಪ ಹೇಳಿದರು.

ಮ.ಗೂ.ಸದಾನಂದಯ್ಯ,ಸಹಕಾರ್ಯದರ್ಶಿ ಟಿ.ಎಸ್. ಕುಮಾರಸ್ವಾಮಿ, ಸಂಚಾಲಕ ತಾರು ನಟರಾಜ ಸುದ್ದಿಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: